Friday, September 20, 2024
ಸುದ್ದಿ

ದುಬೈ ನಲ್ಲಿ ನಡೆಯಲಿರುವ ಕುರ್‌ಆನ್‌ ಸ್ವರ್ಧೆಗೆ ಸಚಿವ ಯು.ಟಿ ಖಾದರ್ ಪುತ್ರಿ ‘ಹವ್ವಾ ನಸೀಮಾ’ ಆಯ್ಕೆ- ಕಹಳೆ ನ್ಯೂಸ್

ಮಂಗಳೂರು, ನ 01 : ದುಬೈ ನಲ್ಲಿ ನ. 4ರಿಂದ 16ರ ವರೆಗೆ ನಡೆಯಲಿರುವ ಶೈಖಾ ಫಾತಿಮಾ ಬಿನ್‌ ಮುಬಾರಕ್‌ ಹೆಸರಿನ “ಅಂತಾರಾಷ್ಟ್ರೀಯ ದುಬೈ ಹೋಲಿ ಕುರ್‌ಆನ್‌ ಅವಾರ್ಡ್‌’ ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ರಾಜ್ಯ ನಗರಾಭಿವೃದ್ದಿ , ವಸತಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮತ್ತು ಲಾಮಿಸ್‌ ದಂಪತಿಯ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ವರ್ಧೆಗಾಗಿ ಆರು ತಿಂಗಳ ವಿವಿಧ ಪ್ರಕ್ರಿಯೆಗಳ ನಂತರ ವಿಶ್ವದ 63 ಸ್ಪರ್ಧಾಳುಗಳ ಜತೆಗೆ ಹವ್ವಾ ಅವರನ್ನು ಯುಎಇ ಸರಕಾರ ಆಯ್ಕೆ ಮಾಡಿದ್ದು ಈ ಸ್ವರ್ಧೆಯೂ ದುಬೈನ ಅಲ್‌ ಮಮ್ಝಾರ್‌ ಸೈಂಟಿಫಿಕ್‌ ಕಲ್ಚರಲ್‌ ಆ್ಯಂಡ್ ಅಸೋಸಿಯೇಶನ್ ನಲ್ಲಿ ಸ್ಪರ್ಧೆ ನಡೆಯಲಿದೆ.

ಜಾಹೀರಾತು

ಶೈಖಾ ಫಾತಿಮಾ ಬಿನ್‌ ಮುಬಾರಕ್‌ ಅವರು ಯುಎಇಯ ಸ್ಥಾಪಕ ಅಧ್ಯಕ್ಷ ಶೈಖ್‌ ಝಾಯೆದ್‌ ಬಿನ್‌ ಸುಲ್ತಾನ್‌ ಅಲ್‌ ನಹ್ಯಾನ್‌ ಅವರ ಪತ್ನಿ. “ಮದರ್‌ ಆಫ್‌ ಯುಎಇ’ ಎಂಬ ಖ್ಯಾತಿ ಅವರಿಗಿದೆ. 2016 ನವಂಬರ್‌ನಲ್ಲಿ ಪ್ರಾರಂಭವಾದ ಹೋಲಿ ಕುರ್‌ಆನ್‌ ಅವಾರ್ಡ್‌ಗೆ ಪವಿತ್ರ ಕುರ್‌ಆನ್‌ ಕಂಠಪಾಠ ಮಾಡಿರುವ 25 ವರ್ಷದೊಳಗಿನ ಮಹಿಳಾ ಸ್ಪರ್ಧಿಗಳು ಭಾಗವಹಿಸುತ್ತಾರೆ.

ಪ್ರಥಮ ಬಹುಮಾನವಾಗಿ 2.50 ಲಕ್ಷ ದಿರ್ಹಮ್‌ (50 ಲಕ್ಷ ರೂ.) ಮತ್ತು ಹೋಲಿ ಕುರ್‌ಆನ್‌ ಪ್ರಶಸ್ತಿಯನ್ನು ಯುಎಇ ಸರಕಾರ ನೀಡುತ್ತದೆ. ಈ ವರ್ಷ 3ನೇ ಆವೃತ್ತಿ ಆಗಿದ್ದು, ಸುಮಾರು 70 ರಾಷ್ಟ್ರಗಳ ಸ್ಪರ್ಧಾಳುಗಳಿದ್ದಾರೆ.ಹವ್ವಾ ನಸೀಮಾ ಹಾಗೂ ಯು.ಟಿ.ಖಾದರ್ ಅವರಿಗೆ ಈಗಾಗಲೇ ಯುಎಇ ಸರಕಾರ ವೀಸಾ ಹಾಗೂ ವಿಮಾನ ಟಿಕೆಟ್ ಕಳುಹಿಸಿಕೊಟ್ಟಿದ್ದು, ನ. 3 ರಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಹೊರಡಲಿದ್ದಾರೆ. ಅಲ್ಲಿನ ತಂಗುವ ವ್ಯವಸ್ಥೆ, ಊಟೋಪಚಾರ ಹಾಗೂ ಇನ್ನಿತರ ಖರ್ಚನ್ನು ಯುಎಇ ಸರಕಾರ ಭರಿಸಲಿದೆ

ಮಕ್ಕಾದಲ್ಲಿ ಮಗಳು ಕಾಣೆಯಾದಾಗ ಖಾದರ್‌ ದಂಪತಿಗಳಿಂದ ಹರಕೆ
ಕೆಲ ವರ್ಷಗಳ ಹಿಂದೆ ಯು.ಟಿ. ಖಾದರ್‌ ದಂಪತಿ ಪವಿತ್ರ ಮಕ್ಕಾ ಯಾತ್ರೆ ತೆರಳಿದ್ದಾಗ ಹವ್ವಾ ನಸೀಮಾ ಜನಜಂಗುಳಿ ಕೈತಪ್ಪಿ ಹೋಗಿದ್ದಳು. ಎಷ್ಟು ಹುಡುಕಿದರೂ ಸಿಗಲಿಲ್ಲ. ಖಾದರ್‌ ದಂಪತಿ ಕಅಬಾಲಯದಲ್ಲಿ ಪ್ರಾರ್ಥಿಸುತ್ತಾ ಮಗಳು ಸಿಕ್ಕರೆ ಕುರ್‌ಆನ್‌ ಕಂಠಪಾಠ ಮಾಡಿಸುತ್ತೇವೆ ಎಂದು ಹರಕೆ ಹೊತ್ತಿದ್ದರು. ಹವ್ವಾ ಪತ್ತೆಯಾದಳು. ಬಳಿಕ ಹವ್ವಾ ನಸೀಮಾ ಕುರ್‌ಆನ್‌ ಅಧ್ಯಯನ ಆರಂಭಿಸಿದರು. ಬಳಿಕ ಅಲ್ಲಿಂದ “ಹಾಫಿಝಾ” ಎಂಬ ಬಿರುದಾಂಕಿತರಾದರು.

ಎರಡು ವರ್ಷಗಳಿಂದ ಕೇರಳ ಮಲಪ್ಪುರಂನಲ್ಲಿರುವ ಕಡಲುಂಡಿಯ ಮಅದಿನ್‌ ಕ್ಯೂಲ್ಯಾಂಡ್‌ ಸಂಸ್ಥೆಯಲ್ಲಿ ಉನ್ನತ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಹವ್ವಾ ಇದೇ ವೇಳೆ ಮಕ್ಕಳಿಗೆ ಕುರ್‌ಆನ್‌ ಪಾಠವನ್ನೂ ಕಲಿಸುತ್ತಿದ್ದಾರೆ. ಜತೆಗೆ ಮಲಪ್ಪುರಂ ಮಂಜೇರಿ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಲೌಕಿಕ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ.

ಅಲ್ಲಿ “ಹಾಫಿಝಾ” ಬಿರುದುದಾರಿಯಾಗಿ ಹೊರಬಂದರು. ಇನ್ನೂ ಹೆಚ್ಚಿನ ಧಾರ್ಮಿಕ ವಿದ್ಯೆಯೊಂದಿಗೆ ಶಾಲಾ ವಿದ್ಯಾಭ್ಯಾಸವನ್ನೂ ಮುಂದುವರೆಸುವ ಸಲುವಾಗಿ ಹವ್ವಾ ನಸೀಮಾ ಅವರು ಕಳೆದ ಎರಡು ವರ್ಷಗಳಿಂದ ಕೇರಳದ ಮಲಪ್ಪುರಂನಲ್ಲಿರುವ ಕಡಲುಂಡಿ ಖಲೀಲ್ ತಂಙಳ್ ಅವರ ನೇತೃತ್ವದ ಮಅದಿನ್ “ಕ್ಯೂಲ್ಯಾಂಡ್” ಸಂಸ್ಥೆಯಲ್ಲಿ ದಾಖಲಾಗಿದ್ದಾರೆ. ಪ್ರಸ್ತುತ ಅಲ್ಲಿ ಹೆಚ್ಚಿನ ವಿದ್ಯಾರ್ಜನೆ ಪಡೆಯುತ್ತಾ ಮಕ್ಕಳಿಗೆ ಕುರ್ ಆನ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರ ಜೊತೆಗೆ ಹತ್ತಿರದ ಮಂಜೇರಿ ಸರಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತಿದ್ದಾರೆ.