Thursday, November 14, 2024
ಉಡುಪಿಸುದ್ದಿ

ಕಡಲ ಕೊರೆತದ ನಡುವೆ ತ್ರಾಸಿ ಮರವಂತೆ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ, ಸಮುದ್ರಕ್ಕೆ ಇಳಿದು ಅನಾಹುತಕ್ಕೆ ಆಹ್ವಾನ- ಕಹಳೆ ನ್ಯೂಸ್

ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆ ಹಿನ್ನೆಲೆ ಸಾಕಷ್ಟು ಭಾಗದಲ್ಲಿ ಕಡಲ ಕೊರೆತ ಸಮಸ್ಯೆ ಉಂಟಾಗಿದೆ(Karnataka Rain). ಆದ್ರೆ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀಚ್​ನಲ್ಲಿ(Maravanthe Beach) ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ. ಪ್ರತಿ ದಿನ ಪ್ರವಾಸಿಗರು ಮರವಂತೆ ಬೀಚ್​ಗೆ ಆಗಮಿಸಿ ಸಮುದ್ರದ ಅಲೆಗಳ ನರ್ತನವನ್ನು ಎಂಜಾಯ್ ಮಾಡಿದ್ದಾರೆ. ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಅನಾಹುತಕ್ಕೆ ಆಹ್ವಾನ ಕೊಟ್ಟಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆಗಾಲ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬೀಚ್​ಗಳಿಗೂ ಪ್ರವೇಶ ನಿಷೇಧ ಹೇರಲಾಗಿದೆ. ಮಳೆಗಾಲದಲ್ಲಿ ಕಡಲಬ್ಬರ ಜಾಸ್ತಿ ಆಗುವ ಹಿನ್ನಲೆ ಬೀಚ್​ಗಳ ಬಳಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಳೆಗಾಲದಲ್ಲಿ‌ಸಮುದ್ರಕ್ಕೆ ಇಳಿಯುದಕ್ಕೆ ನಿಷೇಧ ಮಾಡಲಾಗಿದೆ. ಪೊಲೀಸ್ ರಿಬ್ಬನ್ ಕಟ್ಟಿದ್ರು ಕೂಡ ಪ್ರವಾಸಿಗರ ಅಟ್ಟಹಾಸ..ಈಗಾಗಲೇ ಜಿಲ್ಲೆಯ ಮಲ್ಪೆ ಬೀಚ್​ಗೆ ಬಲೆ ಅಳವಡಿಕೆ ಮಾಡಲಾಗಿದೆ. ಆದರೆ ಮರವಂತೆ ಬೀಚ್​ಗೆ ಯಾವುದೇ ಭದ್ರತೆ ಕೈಗೊಂಡಿಲ್ಲ. ಹೀಗಾಗಿ ಮೂರು ಕಿಲೋಮೀಟರ್ ಉದ್ದದ ಬೀಚ್​ಗೆ ಪ್ರವಾಸಿಗರು ನಿತ್ಯ ಆಗಮಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ನೀಡದೆ ಸಮುದ್ರಕ್ಕೆ ಇಳಿದು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತೆ ಬೀಚ್​ಗೆ ಇಳಿಯುತ್ತಿದ್ದಾರೆ. ದಿನವೂ ಸಾವಿರಾರು ಪ್ರವಾಸಿಗರು ಮರವಂತೆ ಬೀಚ್​ಗೆ ಭೇಟಿ ನೀಡುತ್ತಿದ್ದು ಬೀಚ್​ಗೆ ಫೆನ್ಸಿಂಗ್ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರತಿ ವರ್ಷವೂ ಕೂಡ ಒಂದಲ್ಲ ಒಂದು ಅವಘಡಗಳು ಇಲ್ಲಿ ನಡೆಯುತ್ತವೆ. ಹೀಗಾಗಿ ಮಲ್ಪೆ ಬೀಚಿನಷ್ಟೇ ಪ್ರಾಮುಖ್ಯತೆಯನ್ನು ಮರವಂತೆ ಬೀಚ್ ಗೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕಡಲ ಕೊರೆತದ ನಡುವೆ ಮರವಂತೆ ಬೀಚ್​ನಲ್ಲಿ ಪ್ರವಾಸಿಗರ ಹುಚ್ಚಾಟ, ಸಮುದ್ರಕ್ಕೆ ಇಳಿದು ಅನಾಹುತಕ್ಕೆ ಆಹ್ವಾನ