Saturday, November 23, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ ರಿ ಬಂಟ್ವಾಳ ಘಟಕ ಇದರ ವತಿಯಿಂದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಅಂಗವಾಗಿ “ಗುರುತತ್ವವಾಹಿನಿ” ಮಾಲಿಕೆ-1 ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ : ನಾರಾಯಣ ಗುರುಗಳ ಸಂದೇಶದ ಜೊತೆ ಯುವವಾಹಿನಿ ಸದಸ್ಯರ ಬಾಂದವ್ಯದ ಬೆಸುಗೆ ಬಲಿಷ್ಟವಾಗುತ್ತದೆ ಸಮಾಜದ ಸ್ವಾಸ್ತ್ಯ ಮತ್ತು ಸಂಘಟನೆಗೆ ಈ ರೀತಿಯ ಕಾರ್ಯಕ್ರಮದ ಅಗತ್ಯ ಇದೆ ಎಂದು ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ಅಭಿಪ್ರಾಯ ಪಟ್ಟರು.

ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ. )ಬಂಟ್ವಾಳ ಘಟಕ ಇದರ ವತಿಯಿಂದ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಏಲಬೆ ನಾಗೇಶ್ ಪೂಜಾರಿ ಯವರ ಮನೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಅಂಗವಾಗಿ “ಗುರುತತ್ವವಾಹಿನಿ” ಮಾಲಿಕೆ-1 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ , ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ, ಮಾಜಿ ಅಧ್ಯಕ್ಷರು ಪ್ರೇಮನಾಥ ಕೆ. ಶಿವಾನಂದ, ರಾಜೇಶ್ ಸುವರ್ಣ , ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಕೋಶಾಧಿಕಾರಿ ಗೀತಾ ಜಗದೀಶ್, ಸಾಂಸ್ಕೃತಿಕ ನಿರ್ದೇಶಕರು ಧನುಷ್ ಮದ್ವ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡು, ಮಹಿಳಾ ನಿರ್ದೇಶಕಿ ಹರಿಣಾಕ್ಷಿ, ಆರೋಗ್ಯ ನಿರ್ದೇಶಕರು ಮಹೇಶ್ , ಸದಸ್ಯ ಪ್ರಶಾಂತ್ ಏರಮಲೆ ಮತ್ತಿತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು