Sunday, January 19, 2025
ದಕ್ಷಿಣ ಕನ್ನಡಮೂಡಬಿದಿರೆಯಕ್ಷಗಾನ / ಕಲೆಸುದ್ದಿ

ನಿಡ್ಲೆ ಗೋವಿಂದ ಭಟ್ ಮತ್ತು ಪುತ್ತಿಗೆ ಕುಮಾರ ಗೌಡ ರಿಗೆ ಕಾಂತಾವರ ಯಕ್ಷದೇಗುಲ ಪ್ರಶಸ್ತಿ– ಕಹಳೆ ನ್ಯೂಸ್

ಮೂಡುಬಿದಿರೆ : ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ಅವರಿಗೆ ಹಾಗೂ ಸುರತ್ಕಲ್ ಮೇಳದ ನಿವೃತ್ತ ಕಲಾವಿದ ಪುತ್ತಿಗೆ ಕುಮಾರ ಗೌಡರವರಿಗೆ ಯಕ್ಷದೇಗುಲ ಪ್ರಶಸ್ತಿಯನ್ನು ನೀಡಲು ಶ್ರೀ ಯಕ್ಷದೇಗುಲ ಕಾಂತಾವರ ಆಯ್ಕೆ ಸಮಿತಿಯು ತೀರ್ಮಾನಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ ಕೂಟ ಬಯಲಾಟ ಸಹಿತ ೨೨ ನೇ ಯಕ್ಷೋಲ್ಲಾಸ ಕಾರ್ಯಕ್ರಮವು ಜುಲೈ ೨೧ರಂದು ಕಾಂತಾವರದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಯಕ್ಷ ರಂಗದ ಸಿಡಿಲ ಮರಿ ಖ್ಯಾತಿ ವೆತ್ತ ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿಯನ್ನು ಯಕ್ಷ ಕಲಾವಿದ ನಿಡ್ಲೆ ಗೋವಿಂದ ಭಟ್ಟರಿಗೆ ಹಾಗೂ ಸವ್ಯಸಾಚಿ ಕಲಾವಿದ ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಹೆಸರಿನಲ್ಲಿ ನೀಡುವ ಸಂಸ್ಮರಣಾ ಪ್ರಶಸ್ತಿಯನ್ನು ಯಕ್ಷಕಲಾವಿದ ಪುತ್ತಿಗೆ ಕುಮಾರ ಗೌಡರಿಗೆ ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಮಹಾವೀರ ಪಾಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.