ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿನ ಜನತೆಗೆ 63ನೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.
ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿ ಹೊಂದಿರುವ ನಾಡು ನಮ್ಮದು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ, ಶಾಂತಿ, ಸಹಬಾಳ್ವೆ, ಸೌಹಾರ್ದದಿಂದ ನಳನಳಿಸುವ ನಾಡು ಇದು.
ನಮ್ಮ ನಡೆ- ನುಡಿ ವ್ಯವಹಾರ, ಎಲ್ಲದರಲ್ಲೂ ಕನ್ನಡತನ ಮೆರೆಯಲಿ. ಏಕೀಕರಣಕ್ಕಾಗಿ ದುಡಿದವರನ್ನು ಸ್ಮರಿಸೋಣ. ಸಮೃದ್ಧ ಕರ್ನಾಟಕವನ್ನು ಕಟ್ಟೋಣ. ತಾಯಿ ಭುವನೇಶ್ವರಿಯ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಅವರು ಹಾರೈಸಿದ್ದಾರೆ.