Saturday, November 23, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ದಕ್ಷಿಣ ಕನ್ನಡದಲ್ಲಿ ಸಮುದ್ರ, ಜಲಪಾತಗಳು ಸೇರಿದಂತೆ ಜಲಮೂಲಗಳಿಗೆ ಪ್ರವೇಶ – ಸಾಹಸ ಚಟುವಟಿಕೆಗಳು, ಚಾರಣಕ್ಕೆ ನಿಷೇಧ ; ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಟ್ಟುನಿಟ್ಟಿನ ಆದೇಶ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಳೆಗಾಲದಲ್ಲಿ ಜಿಲ್ಲೆಯಾದ್ಯಂತ ಜಲ ಚಟುವಟಿಕೆಗಳು ಮತ್ತು ಚಾರಣದಲ್ಲಿ ತೊಡಗುವುದನ್ನು ನಿಷೇಧಿಸಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜುಲೈ 6ರಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಆದೇಶವು ತತ್ ಕ್ಷಣವೇ ಜಾರಿಗೆ ಬರಲಿದ್ದು ಮುಂದಿನ ಸೂಚನೆ ಬರುವವರೆಗೂ ಜಾರಿಯಲ್ಲಿರುತ್ತದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಆದೇಶದ ಪ್ರಕಾರ, ಜಲಪಾತಗಳು, ತೊರೆಗಳು, ನದಿಗಳು, ಸಮುದ್ರ ಮತ್ತು ಜಲಾಶಯಗಳಲ್ಲಿ ಈಜುವುದು, ಜಲಮೂಲಗಳಿಗೆ ಪ್ರವೇಶಿಸುವುದು ಮತ್ತು ಯಾವುದೇ ಸಾಹಸ ಚಟುವಟಿಕೆಗಳನ್ನು ಕೈಗೊಳ್ಳುವುದು ಸೇರಿದಂತೆ ನೀರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯಿದೆ, 2005 ರ ಸೆಕ್ಷನ್ 34 (ಸಿ) ಮತ್ತು ಭಾರತೀಯ ನಾಗರಿಕ ರಕ್ಷಣಾ ಸಂಹಿತೆ, 2023 ರ ಸೆಕ್ಷನ್ 152 ಮತ್ತು 163 ರ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಾರಣ ನಿಷೇಧ

ಪ್ರತ್ಯೇಕ ಅಧಿಸೂಚನೆಯಲ್ಲಿ, ಜಿಲ್ಲಾಡಳಿತ ಮಳೆಗಾಲದಲ್ಲಿ ಜಿಲ್ಲೆಯ ಪರ್ವತ ಶಿಖರಗಳಲ್ಲಿ ಚಾರಣ ಮತ್ತು ಸಾಹಸ ಚಟುವಟಿಕೆಗಳನ್ನು ನಿಷೇಧಿಸಿದೆ.

ನಿರೀಕ್ಷಿತ ವ್ಯಾಪಕ ಮಳೆ ಮತ್ತು ಭೂಕುಸಿತಗಳು, ಮಣ್ಣು ಕುಸಿತಗಳು, ಸಿಡಿಲು ಮತ್ತು ಮರಗಳು ಬೀಳುವಂತಹ ಸಂಭಾವ್ಯ ಅಪಾಯಗಳನ್ನು ತಪ್ಪಿಸುವ ಸಲುವಾಗಿ ನಿಷೇಧ ಮಾಡಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ.

ಸಾರ್ವಜನಿಕರು ಮತ್ತು ಪ್ರವಾಸಿಗರು ತಮ್ಮ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು, ಯಾವುದೇ ಅಹಿತಕರ ಘಟನೆಗಳನ್ನು ನಡೆಯದೇ ಇರಲು ಈ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಡಳಿತ ಒತ್ತಾಯಿಸಿದೆ.