ವಿಶ್ವ ಬ್ಯಾಂಕ್‍ನ ಉದ್ಯಮಸ್ನೇಹಿ ವರದಿಯಲ್ಲಿ ಈ ಬಾರಿ ಭಾರತವು ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ. ಈ ಪಟ್ಟಿಯಲ್ಲಿ 23 ಸ್ಥಾನಗಳಲ್ಲಿ ಮುಂದೆ ಹೋಗಿರುವ ಭಾರತ 77 ನೇ ಸ್ಥಾನದಲ್ಲಿದೆ.
ಗಡಿಯಾಚೆಗಿನ ವ್ಯವಹಾರ, ಕಟ್ಟಡ ಮತ್ತು ಭೂಮಿಗೆ ಮುನಿಸಿಪಲ್ ಅನುಮತಿಗಳು, ಒಪ್ಪಂದಗಳ ಜಾರಿ. ಮೊದಲಾದವುಗಳನ್ನು ಸರಳಗೊಳಿಸುವ ಅಂಶಗಳನ್ನು ಇದು ಒಳಗೊಂಡಿದೆ.
“ನಾವು ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೋದಿಯವರು ನಾವು 50 ಸ್ಥಾನಗಳೊಳಗೆ ಬರಬೇಕು ಎಂದಿದ್ದರು. ನಾವು ಇಂದು 77ಕ್ಕೆ ತಲುಪಿದ್ದೇವೆ” ಎಂದು ವಿಶ್ವಬ್ಯಾಂಕ್ ವರದಿಯನ್ನುದ್ದೇಶಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.