ಜು. 09ರಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಇವರ ಸಾರಥ್ಯದಲ್ಲಿ ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ರೋಗಗಳು ಮತ್ತು ಅಡಿಕೆ ಕೃಷಿಕರ ಇತರ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಇವರ ಸಾರಥ್ಯದಲ್ಲಿ ತೋಟಗಾರಿಕೆ ಇಲಾಖೆ ಪುತ್ತೂರು ಇವರ ಸಹಭಾಗಿತ್ವದಲ್ಲಿ ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ರೋಗಗಳು ಮತ್ತು ಅಡಿಕೆ ಕೃಷಿಕರ ಇತರ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮವು ಜು. 09ರಂದು ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯಲ್ಲಿ ನಡೆಯಲಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಗತಿಪರ ಕೃಷಿಕರಾದ ರಮೇಶ್ ದೇಲಂಪಾಡಿ ವಿಚಾರ ಮಂಡಿಸಲಿದ್ದಾರೆ.
ಪುತ್ತೂರಿನ ಹಿರಿಯ ವಕೀಲರಾದ ಚಿದಾನಂದ ಬೈಲಾಡಿ ರೈತರಿಗೆ ಕಾನೂನು ಸಲಹೆ ನೀಡಲಿದ್ದು, ದಿ ರೂರಲ್ ಮಿರರ್ ನ ಸಂಪಾದಕ ಮಹೇಶ್ ಪುಚ್ಚಪ್ಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾಸರಗೋಡಿನ CPCRI ಬೆಳೆ ಸಂರಕ್ಷಣೆ ವಿಭಾಗದ ಮುಖ್ಯಸ್ಥ ಡಾ| ವಿನಾಯಕ ಹೆಗ್ಡೆ ಎ ಹಾಗೂ ವಿಟ್ಲ ವಿಜ್ಞಾನಿ CPCRI ಪ್ರಾಂತಿಯ ಕೇಂದ್ರದ ವಿಜ್ಞಾನಿ ಡಾ| ಭವಿಷ್ಯ, ಸದಾಶಿವ ಭಟ್ ಪಡೀಲ್ ಅವರ ತೋಟದಲ್ಲಿ ಕೃಷಿ ಮಾಹಿತಿ ಪ್ರಾತ್ಯಕ್ಷತೆ ನೀಡಲಿದ್ದಾರೆ.