Sunday, January 19, 2025
ಕಾಸರಗೋಡುಸುದ್ದಿ

ಕಾಸರಗೋಡು: ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಪ್ರಥಮ ತ್ರೈಮಾಸಿಕದ ಪ್ರಗತಿ ಪರಿಶೀಲನಾ ಸಭೆ – ಕಹಳೆ ನ್ಯೂಸ್

ಕಾಸರಗೋಡು ವಲಯದ ಕೂಡ್ಲು ವನಿತಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂರ ಅಧ್ಯಕ್ಷತೆಯಲ್ಲಿ ನಡೆಯಿತು. ದ.ಕ. ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ, ನಿರ್ದೇಶಕರೂ ಆದ ಪ್ರವೀಣ್ ಕುಮಾರ್ ಜನಜಾಗೃತಿ ಮತ್ತು ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿ ಕನಿಷ್ಠ 6 ಮಂದಿ ಪದಾದಿಕಾರಿಗಳನ್ನು ಆಯ್ಕೆ ಮಾಡುವ ಬಗ್ಗೆ, ನವಜೀವನ ಸಮಿತಿಗಳ ಬಲವರ್ಧನೆಗಾಗಿ ಪೋಷಕರನ್ನು ಆಯ್ಕೆ ಮಾಡಿರುವ ಬಗ್ಗೆ, ಕಳೆದ ಮೂರು ತಿಂಗಳ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಮುಂದಿನ ದಿನಗಳಲ್ಲಿ ಕಾಲಕ್ಕನುಗುಣವಾಗಿ ಅನುಷ್ಠಾನಗೊಳಿಸಬೇಕಾದ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಪ್ರಥಮ ಸಭೆಯು ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು ನೂತನ ವೇದಿಕೆಯ ಸರ್ವ ಪದಾಧಿಕಾರಿಗಳಿಗೂ ಅಭಿನಂದಿಸಿದರು. ವಲಯ ಮಟ್ಟದಲ್ಲಿ ಜನಜಾಗೃತಿ ವೇದಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿ ವಲಯದಲ್ಲಿ ಪ್ರಸ್ತುತ ಇರುವ ಪದಾಧಿಕಾರಿಗಳು ಸೇರಿದಂತೆ ಕನಿಷ್ಠ ಒಬ್ಬರು ಮಹಿಳಾ ಪದಾಧಿಕಾರಿಯವರನ್ನು ಸೇರಿದಂತೆ ಕನಿಷ್ಠ 6 ಮಂದಿ ಪದಾದಿಕಾರಿಗಳನ್ನು ಆಯ್ಕೆ ಮಾಡುವ ಬಗ್ಗೆ, ನವಜೀವನ ಸಮಿತಿಗಳ ಬಲವರ್ಧನೆಗಾಗಿ ಪೋಷಕರನ್ನು ಆಯ್ಕೆ ಮಾಡಿರುವ ಬಗ್ಗೆ, ಕಳೆದ ಮೂರು ತಿಂಗಳ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಮುಂದಿನ ದಿನಗಳಲ್ಲಿ ಕಾಲಕ್ಕನುಗುಣವಾಗಿ ಅನುಷ್ಠಾನಗೊಳಿಸಬೇಕಾದ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ದಿನಗಳಲ್ಲಿ ಜನಜಾಗೃತಿ ವೇದಿಕೆಯ ಸಭೆಯಲ್ಲಿ ನವ ಜೀವನ ಸಮಿತಿಗಳ ಅಧ್ಯಕ್ಷರುಗಳನ್ನು, ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಮತ್ತು ಮಾಸ್ಟರರವರನ್ನು, ಶ್ರೀ ಧರ್ಮಸ್ಥಳ ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷರನ್ನು ಭಾಗವಹಿಸುವಂತೆ ಮಾಡುವ ಬಗ್ಗೆ ತಿಳಿಸಿದರು. ವಾಮನ ಆಚಾರ್ಯ, ಶರೀಫ್ ಕೊಡವಂಜಿ, ಸಂಜೀವ ಶೆಟ್ಟಿ ಮೊಟ್ಟೆಕುಂಜ ಮುಂತಾದವರು ಶುಭಾಶಂಸನೆಗೈದರು. ಐದು ವಲಯಗಳ ಜ.ಜಾ. ವೇದಿಕೆಯ ವಲಯಾಧ್ಯಕ್ಷರುಗಳು ಹಾಗೂ ಜ.ಜಾ. ವೇದಿಕೆಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬದಿಯಡ್ಕ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಸ್ವಾಗತಿಸಿ ಕಾರಡ್ಕ ವಲಯ ಮೇಲ್ವಿಚಾರಕ ಅನಿಲ್ ವಂದಿಸಿದರು. ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜುಲೈ 14ರಂದು ಗುರುಸದನದಲ್ಲಿ ನಡೆಯಲಿರುವ ಜನಜಾಗೃತಿ ಬದಿಯಡ್ಕ ವಲಯದ ಸದಸ್ಯರೂ ಆದ ಯಕ್ಷಗಾನ ಗುರು ಜಯರಾಮ ಪಾಟಾಳಿ ಪಡುಮಲೆ ಅವರ 50ನೇ ವರ್ಷದ ಜಯರಾಮ ಸುವರ್ಣ ಸಂಭ್ರಮ ಎಂಬ ಕಾರ್ಯಕ್ರಮದ ಪೂರ್ವ ಭಾವಿ ಸಮಿತಿ ರಚನಾ ಸಭೆಗೆ ಎಲ್ಲರನ್ನೂ ಈ ಸಂದರ್ಭದಲ್ಲಿ ಆಮಂತ್ರಿಸಲಾಯಿತು.