ಬೆಂಗಳೂರು: 63ನೇ ಕನ್ನಡ ರಾಜ್ಯೋತ್ಸವದ ಈ ಐತಿಹಾಸಿಕ ದಿನದಂದು ಕನ್ನಡ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡಲ್ಲಿಯೇ ಶುಭಾಶಯ ಕೋರಿದ್ದಾರೆ.
ನರೇಂದ್ರ ಮೋದಿ ಅವರು,’ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.