Recent Posts

Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನೆಹರೂನಗರ ರಸ್ತೆ ಬದಿ ಕೆಸರು ತೆರವು ಮಾಡುವಂತೆ ಹೈವೇ ಇಂಜಿನಿಯರ್ ಗೆ ಶಾಸಕ ಅಶೋಕ್ ರೈ ಸೂಚನೆ- ಕಹಳೆ ನ್ಯೂಸ್

ಪುತ್ತೂರು: ರಾ.ಹೆದ್ದಾರಿ 275 ರ ನೆಹರೂ ನಗರದಿಂದ ಮುರ, ಹಾಗೂ ಸುದಾನ ವಸತಿ ಶಾಲೆಯ ತನಕ ರಸ್ತೆ ಬದಿ ಮಣ್ಣು ಹಾಕಲಾಗಿದ್ದು ಮಳೆಗೆ ಮಣ್ಣು ಕೆಸರಾಗಿ ಸಂಕಷ್ಟ ಎದುರಾಗಿದೆ ಎಂಬ ಸಾರ್ಬಜನಿಕರ ದೂರು ಹಿನ್ನೆಲೆಯಲ್ಲಿ ಹೈವೇ ಇಂಜಿನಿಯರ್ ಗೆ ಕರೆ ಮಾಡಿದ ಶಾಸಕರು ಹೈವೇ ಬದಿಯಲ್ಲಿರುವ ಕೆಸರು‌ಮಣ್ಣನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.


ರಸ್ತೆ ಬದಿಗೆ ಹಾಕಿರುವ ಮಣ್ಣು ಕೆಸರಿನಂತಾದ ಪರಿಣಾಮ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ‌ಮತ್ತು ದ್ವಚಕ್ರ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ಅನೇಕ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಅಪಘಾತಗಳೂ ಉಂಟಾಗಿತ್ತು. ಎರಡು‌ದಿನದೊಳಗೆ ಸಂಪೂರ್ಣ ಕೆಸರನ್ನು ತೆರವು ಮಾಡುವುದಾಗಿ ಎನ್ ಎಚ್ ಇಂಜಿನಿಯರ್ ಶಾಸಕರಿಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು