Tuesday, January 21, 2025
ಕಾಪುಸುದ್ದಿ

ಹೆಜಮಾಡಿ ಕರಾವಳಿ ಯುವಕ – ಯುವತಿ ವೃಂದದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ- ಕಹಳೆ ನ್ಯೂಸ್

ಕರಾವಳಿ ಯುವಕ – ಯುವತಿ ವೃಂದ (ರಿ.) ಹೆಜಮಾಡಿ ಇವರ ವತಿಯಿಂದ ಹೆಜಮಾಡಿ ಬಸ್ ನಿಲ್ದಾಣ ಬಳಿ ಹಮ್ಮಿಕೊಳ್ಳಲಾದ “ವನಮಹೋತ್ಸವ – 2024” ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕರಾವಳಿ ಯವಕ ವೃಂದದ ಅಧ್ಯಕ್ಷರಾದ ಅಶೋಕ್ ವಿ.ಕೆ, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ, ಉಪಾಧ್ಯಕ್ಷರಾದ ಮೋಹನ್ ಸುವರ್ಣ, ಕರ್ನಾಟಕ ವಿದ್ಯುತ್ ನಿಗಮದ ನಿವೃತ್ತ ಅಧೀಕ್ಷಕ ಅಭಿಯಂತರರಾದ ಕುಮಾರಸ್ವಾಮಿ ಶಣೈ, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಏಳೂರು ಮೋಗವೀರ ಮಹಾಸಭಾ ಅಧ್ಯಕ್ಷರಾದ ಎಸ್ ದಿವಾಕರ ಹೆಜಮಾಡಿ, ಉದ್ಯಮಿಗಳಾದ ಹೇಮಾನಂದ ಕೆ ಪುತ್ರನ್, ಭಾರತೀಯ ನೌಕಾಪಡೆಯ ಲಿಖಿತ್ ಕೆ ಸುವರ್ಣ, ಹೆಜಮಾಡಿ ಕರಾವಳಿ ಯುವತಿ ವೃಂದ (ರಿ.) ಅಧ್ಯಕ್ಷರಾದ ಪವಿತ್ರಾ ಗಿರೀಶ್, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶರಣ್ ಮಟ್ಟು, ಬಬಿತಾ ಹಾಗೂ ಪ್ರಮುಖರು ಮತ್ತು ಕರಾವಳಿ ಯುವಕ ಯುವತಿ ವೃಂದದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು