Tuesday, January 21, 2025
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರಿನಿಂದ ನಾಪತ್ತೆಯಾಗಿದ್ದ ಹಿಂದೂ ಯುವತಿಯನ್ನು ನಟೋರಿಯಸ್ ರೌಡಿಶೀಟರ್, ಜಿಹಾದಿ ಮಹಮ್ಮದ್ ಅಶ್ಪಕ್ ಜೊತೆ ಪತ್ತೆಹಚ್ಚಿದ ಪೋಲಿಸರು – ಕಹಳೆ ನ್ಯೂಸ್

ಮಂಗಳೂರು: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಹಿಂದೂ ಯುವತಿಯನ್ನು ನಟೋರಿಯಸ್ ಮುಸ್ಲಿಂ ಯುವಕನ ಜೊತೆ ಪತ್ತೆ ಹಚ್ಚಿರುವ ಘಟನೆ ನಗರದ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳೂರಿನ ಪ್ರತಿಷ್ಟಿತ ಖಾಸಗಿ ಕಾಲೇಜಿನಲ್ಲಿ ಬಿಸಿಎ ಕಲಿಯುತ್ತಿದ್ದ ಯುವತಿಯನ್ನು ಜುಲೈ 4ರಂದು ಮಹಮ್ಮದ್ ಅಶ್ಪಕ್ ಕಿಡ್ನಪ್ ಮಾಡಿದ್ದು ಆ ಕೂಡಲೇ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು ಮತ್ತು ಯುವತಿಯನ್ನು ದುಷ್ಟ ಅಶ್ಪಕ್ ಮುಷ್ಟಿಯಿಂದ ಬಿಡಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಮತ್ತೆ ಜೂ. 30ರಂದು ಯುವತಿಯ ಕಿಡ್ನಪ್ ನಡೆದಿದ್ದು ಸದ್ಯ ಅವರಿಬ್ಬರು ಕೆರಳದ ಕೊಚ್ಚಿಯಲ್ಲಿದ್ದರೆಂದು ಯುವತಿಯ ತಂದೆ ದೂರಿನಲ್ಲಿ ದಾಖಲಿಸಿದ್ದಾರೆ. ನಟೋರಿಯಸ್ ಮಹಮ್ಮದ್ ಅಶ್ಪಕ್ ಈಗಾಗಲೇ ಒಂದು ಮದುವೆಯಾಗಿದ್ದು ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ ಇವನ ಮೇಲೆ 8 ಕ್ರಿಮಿನಲ್ ಕೇಸು ಇದೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ನನ್ನ ಮಗಳನ್ನು ಅಪಹರಣ ಮಾಡಿ ಕಾನೂನು ಬಾಹಿರವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆಂದು ಹುಡುಗಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಟ್ಟಿರುವ ಬಗ್ಗೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಕುರಿತು ಆಕ್ರೋಶ ಹೊರ ಹಾಕಿರುವ ವಿಶ್ವ ಹಿಂದೂ ಪರಿಷದ್‌ನ ಮುಖಂಡ ಶರಣ್ ಕುಮಾರ್ ಪಂಪವೆಲ್ ಲವ್ ಜಿಹಾದ್ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಾವಳಿಯಲ್ಲಿ ಹೆಚ್ಚುತ್ತಿದೆ ಪ್ರೀತಿ, ಮದುವೆ ಹೆಸರಲ್ಲಿ ಹಿಂದೂ ಯುವತಿಯರ ಮತಾಂತರ. ಈ ಕುರಿತು ಲವ್ ಜಿಹಾದ್ ಗೆ ಕಡಿವಾಣ ಹಾಕಲು ಪ್ರಬಲ ಕಾನೂನು ದೇಶದಲ್ಲಿ ಬರಬೇಕಾಗಿದೆ ಎಂದರು.