Wednesday, March 26, 2025
ಕಾಪುಕೃಷಿಶಿಕ್ಷಣಸುದ್ದಿ

ಪುಟಾಣಿ ಕಂದಮ್ಮನ ಕೈಗಳ್ಳಲ್ಲಿ ಗಿಡಗಳನ್ನು ನೀಡಿ ಹಸಿರಿನ ಅರಿವು ಮೂಡಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ–ಕಹಳೆ ನ್ಯೂಸ್

ಕಾಪು: ಕೈಪುಂಜಾಲು ವಿದ್ಯಾಸಾಗರ ಶಾಲೆಯಲ್ಲಿ ನಾನಾ ಹಣ್ಣಿನ ಗಿಡಗಳು ಮತ್ತು ಔಷಧೀಯ ಗಿಡಗಳ ವಿತರಣೆ ಮತ್ತು ನೆಡುವ ಕಾರ್ಯಕ್ರಮ ನಡೆಯಿತು.
ಉಸಿರಿಗಾಗಿ ಹಸಿರು ಸಂಘಟನೆ ಹಾಗೂ ವಿದ್ಯಾಸಾಗರ ಎಜುಕೇಶನಲ್ ಟ್ರಸ್ಟ್ ಕೈಪುಂಜಾಲು ಆಶ್ರಯದಲ್ಲಿ ಸಂಸ್ಥೆಯ ಟ್ರಸ್ಟ್ ವಠಾರದಲ್ಲಿ ‘ಉಸಿರಿಗಾಗಿ ಹಸಿರು’ ಕಾರ್ಯಕ್ರಮದ ಅಡಿ ಯಲ್ಲಿ ನಾನಾ ಹಣ್ಣಿನ ಗಿಡಗಳು ಮತ್ತು ಔಷಧಿಯ ಗಿಡಗಳ ವಿತರಣೆ ಮತ್ತು ನೆಡುವ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಗಿಡ ವಿತರಿಸಿದರು. ಕೈಪುಂಜಾಲು ವಿದ್ಯಾಸಾಗರ ಎಜುಕೇಶನಲ್ ಅಧ್ಯಕ್ಷ ಸತೀಶ್ ಕುಂದರ್, ಕಾರ್ಯದರ್ಶಿ ರಮೇಶ್ ಪೂಜಾರಿ, ಕಾಪು ತಹಸೀಲ್ದಾರ್ ಪ್ರತಿಭಾ ಆರ್., ಅರಣ್ಯ ಇಲಾಖಾಧಿಕಾರಿ ಕೃಷ್ಣಪ್ಪ, ಪ್ರಿನ್ಸಿಪಾಲ್ ಸಾಕ್ಷಾತ್ ಯು.ಕೆ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಣ್ಯ ಪ್ರೇರಕ ಪ್ರತ್ಯಕ್ಷ ಕಾಮತ್, ಪೆನ್ಸಿಲ್ ಸೋನ್ಸ್, ಡಾ.ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಸದಸ್ಯರಾದ ಸಂತೋಷ್ ಒ. ಶೆಟ್ಟಿಗಾರ್ ಕಾರ್ಯಕ್ರಮ ಆಯೋಜಿಸಿದರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ