Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಸರಕಾರಿ‌ ಆಸ್ಪತ್ರೆಗೆ‌ ಆರೋಗ್ಯ ರಕ್ಷಾ‌ಸಮಿತಿ ಸದಸ್ಯರ ದಿಡೀರ್ ಭೇಟಿ: ಲ್ಯಾಬ್ ವ್ಯವಸ್ಥೆ ಬಗ್ಗೆ ಪರಿಶೀಲನೆ : ಇಬ್ಬರು‌ ಲ್ಯಾಬ್ ಟೆಕ್ನಿಶಿಯನ್ ನೇಮಕ ಅಗತ್ಯ: ಶಾಸಕರ ಮೂಲಕ ಆರೋಗ್ಯ ಸಚಿವರಿಗೆ ಮನವಿ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಡಿ ಹಾಗೂ ಆಸ್ಕರ್ ಆನಂದ್ ರವರು ಭೇಟಿ‌ನೀಡಿ‌ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.


ಆಸ್ಪತ್ರೆಯ ಲ್ಯಾಬ್ ವ್ಯವಸ್ಥೆ ಸರಿಯಾಗಿಲ್ಲ, ಸಂಜೆ ನಾಲ್ಕರ ಬಳಿ ಅಲ್ಲಿ ಯಾವುದೇ ರಕ್ತ ಪರೀಕ್ಷೆಗಳು ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಸಾರ್ಬಜನಿಕರು‌ಸಾಮಾಜಿಕ ತಾಣದಲ್ಲಿ ವ್ಯಕ್ತಪಡಿಸಿದ‌ ಕೆಲವೊಂದು ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ಆಸ್ಪತ್ರೆಗೆ ಭೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲ್ಯಾಬ್ ನಲ್ಲಿ‌ಕ್ಯೂ
ಆಸ್ಪತ್ರೆಗೆ ಭೇಟಿ ನೀಡುವ ವೇಳೆ ಲ್ಯಾಬ್ ನಲ್ಲಿ ರಕ್ತ ಪರೀಕ್ಣೆಗೆ ಜನರು ಕ್ಯೂ ನಿಂತಿದ್ದರು. ಜನರ ಕ್ಯೂ ತುಂಬಾ ಉದ್ದವಾಗಿತ್ತು. ನೇರವಾಗಿ ಲ್ಯಾಬ್ ಒಳಗೆ ತೆರಳಿದ ಸುದೇಶ್ ಶೆಟ್ಟಿಯವರು ವ್ಯವಸ್ಥೆ ಬಗ್ಗೆ ಅಲ್ಲಿನ‌ ಸಿಬಂದಿಗಳಿಂದ ತಿಳಿದುಕೊಂಡರು. ಸದ್ಯಕ್ಕೆ 5 ಮಂದಿ ಸಿಬಂದಿಗಳಿದ್ದಾರೆ.‌ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ರತನಕ ನಾವು ರಕ್ತ ಪರೀಕ್ಷೆ ಮಾಡುತ್ತೇವೆ. ಸಿಬಂದಿಗಳ ಪೈಕಿ ಓರ್ವರು ಬ್ಲಡ್ ಬ್ಯಾಂಕ್ ಗೂ ತೆರಳಬೇಕಾಗುತ್ತದೆ, ಕೋರ್ಟಿಗೆ ಅಗತ್ಯ ಬಿದ್ದರೆ ಅದಕ್ಕೂ ಒಬ್ಬರು ಸಿಬಂದಿ ತೆರಳಬೇಕಾಗುತ್ತದೆ. ದಿನಕ್ಕೆ 100 ರಿಂದ 130 ಮಂದಿ ರಕ್ತ ಪರೀಕ್ಷೆಗೆ ಬರುತ್ತಾರೆ. ರಕ್ತ ಪರೀಕ್ಷಾ ವರದಿಯನ್ನು ಆನ್ ಲೈನ್ ಮೂಲಕ ಅಪ್ಲೋಡು ಮಾಡಬೇಕು, ಕೆಲವೊಮ್ಮೆ ಯಂತ್ರ ಕೈಕೊಡುವುದೂ ಉಂಟು ಆಗ ಸಮಸ್ಯೆಯಾಗುತ್ತದೆ. ತುರ್ತು‌ಸಂದರ್ಭದಲ್ಲಿ‌ ರಾತ್ರಿ ವೇಳೆ ಓರ್ವ ಸಿಬಂದಿ ಬರುತ್ತಾರೆ. ಇಲ್ಲಿ ಲ್ಯಾಬ್ ಟೆಕ್ನಿಶಿಯನ್ ಕೊರತೆ ಇರುವ ಕಾರಣ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು