Recent Posts

Saturday, February 8, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಿಂದ ಕಾಟುಕುಕ್ಕೆಗೆ ಬಸ್ ಸೇವೆ : ಸಾರಿಗೆ ಇಲಾಖೆ ಕಮಿಷನರ್ ಜೊತೆ ಶಾಸಕ ಅಶೋಕ್ ರೈ ಮಾತುಕತೆ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನಿಂದ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಪ್ರಾರಂಭ ಮಾಡುವಲ್ಲಿ ಇಲಾಖೆಯ ಅನುಮತಿಯ ಕುರಿತು ಸಾರಿಗೆ ಇಲಾಖೆಯ‌ ಕಮಿಷನರ್ ಯೋಗಿಶ್ ರವರ ಜೊತೆ ಶಾಸಕ ಅಶೋಕ್ ರೈ ಮಾತುಕತೆ ನಡೆಸಿದ್ದಾರೆ.

ಕಾಟುಕುಕ್ಕೆಗೆ ಅಂತರಾಜ್ಯ ಬಸ್ ಸೇವೆಗೆ ಪರವಾನಿಗೆ ಅಗತ್ಯವಾಗಿದೆ. ಈ ಹಿಂದೆ ಕಾಟುಕುಕ್ಕೆಗೆ ಇದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಿಂದ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿಗೆ ಅನೇಕ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದು ಬಸ್ ಸಂಚಾರವಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಶೀಘ್ರವೇ ಅಂತರಾಜ್ಯ ಪರವಾನಿಗೆಯನ್ನು‌ಮಂಜೂರು ಮಾಡುವಂತೆ ಶಾಸಕರು ಕಮಿಷನರ್ ಗೆ ಮನವಿ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು