Friday, September 20, 2024
ಸುದ್ದಿ

ಡಿಜಿಟಲ್ ವ್ಯವಹಾರಗಳು ತುಂಬಾ ಉಪಯುಕ್ತ: ಸೂರ್ಯನಾರಾಯಣ ಭಟ್ – ಕಹಳೆ ನ್ಯೂಸ್

ಪುತ್ತೂರು: ಇ-ವಾಣಿಜ್ಯದ ಬಗೆಗಿನ ಬದಲಾವಣೆಯನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಡಿಜಿಟಲ್ ಬದಲಾವಣೆ ಮತ್ತು ಅದರಲ್ಲಾಗುವ ಅಭಿವೃದ್ಧಿಯನ್ನು ತಿಳಿಸುವ ಕಾರ್ಯಗಳಲ್ಲಿ ಇ-ವಾಣಿಜ್ಯವು ತುಂಬಾ ಉಪಯುಕ್ತವಾಗಿದೆ ಎಂದು ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಪಿ.ಎಸ್ ಸೂರ್ಯನಾರಾಯಣ ಭಟ್ ಹೇಳಿದರು.

ಇವರು ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾವು ಆಯೋಜಿಸಿದ ಇ- ವಾಣಿಜ್ಯದ ಇತ್ತಿಚಿಗಿನ ಪ್ರವೃತ್ತಿಗಳು ಎನ್ನುವ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೇವೆ ಎಂಬುದು ಅತೀ ಮುಖ್ಯವಾದ ಕಾರ್ಯವಾಗಿದೆ. ಪ್ರಸ್ತುತ ತಂತ್ರಜ್ಞಾನದಲ್ಲಾದ ಬದಲಾವಣೆಯಿಂದಾಗಿ ನಾವು ಇಂದು ಆನ್‌ಲೈನ್ ಮೂಲಕ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಹಾಗಾಗಿ ಇ-ಪೇಟಿಯಮ್‌ನ್ನು ಬಳಸಿಕೊಳ್ಳಬಹುದಾಗಿದೆ. ಇದರಲ್ಲಿ ಭದ್ರತೆ ವ್ಯವಸ್ಥೆಯು ಹೆಚ್ಚು ಇದ್ದು ವ್ಯವಹರಿಸುವರು ಯಾವುದೇ ಭಯವಿಲ್ಲದೆ ಬಳಕೆ ಮಾಡಬಹುದಾಗಿದೆ ಎಂದರು.

ಜಾಹೀರಾತು

ಡಿಜಿಟಲ್‌ಗೆ ವಿನಿಮಯ ಪದ್ದತಿಯು ಹೆಚ್ಚು ಉಪಯುಕ್ತವಾಗಿದ್ದು ವಿನಿಮಯಕ್ಕೆ ಅದರದ್ದೇ ಆದ ಹಂತಗಳನ್ನು ಹೊಂದಿದೆ. ಇದು ಕೀಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭದ್ರತಾ ಕೀ, ಸಾರ್ವಜನಿಕ ಹಾಗೂ ಖಾಸಗಿ ಕೀಗಳನ್ನು ನಾವು ವಿನಿಮಯವಾಗುವ ಹಂತದಲ್ಲಿ ಕಾಣಬಹುದು. ಪ್ರತಿಯೊಂದು ವ್ಯವಸ್ಥೆಗಳು ವಿಕಾಸ ಹೊಂದಲು ಅದರದ್ದೇ ಆದ ಇತಿಹಾಸ ಎಂಬುದು ಇರುತ್ತದೆ. ಆ ಮೂಲಕ ಅವುಗಳು ಅಭಿವೃದ್ಧಿಯನ್ನು ಸಾಧಿತ್ತವೆ. ಈಗೀಗ ಡಿಜಿಟಲ್ ಮುದ್ರೆಗಳನ್ನು ಚಾಲ್ತಿಗೆ ತಂದಿರುವುದು ಶ್ಲಾಘನಿಯವಾಗಿದೆ. ನಾವು ತಂತ್ರಜ್ಞನಗಳನ್ನು ಬಳಸಿಕೊಳ್ಳುವ ಮೂಲಕ ನಮ್ಮಲ್ಲಿರುವ ವ್ಯವಹಾರಿಕ ಜ್ಞಾನವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾದ ಸಂಯೋಜಕಿ ಡಾ. ವಿಜಯ ಸರಸ್ವತಿ ಉಪಸ್ಥಿತರಿದ್ದು ಪ್ರಸ್ತುತ ಕಾಲಘಟ್ಟದಲ್ಲಿ ಇ ಕಾಮರ್ಸ್ ಎನ್ನುವುದು ಅನಿವಾರ್ಯ ವಿಚಾರವಾಗಿದೆ. ನಮ್ಮ ಬದುಕಿನಲ್ಲಿ ಉಸಿರಾಟದಷ್ಟೇ ಸಹಜವಾಗಿ ಇಂದು ಇ ವ್ಯವಹಾರಗಳು ನಡೆಯುತ್ತಿವೆ. ಇಂತಹ ಡಿಜಿಟಲ್ ವ್ಯವಹಾರಗಳನ್ನು ಅರಿತುಕೊಳ್ಳುವುದರಿಂದ ಸಮಯ, ಶ್ರಮ ಎರಡನ್ನೂ ಉಳಿಸಲು ಸಾಧ್ಯವಾಗುತ್ತಿದೆ. ಯುವಜನತೆ ಇಂತಹ ವಿಚಾರಗಳಿಗೆ ಹೆಚ್ಚು ತೊಡಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿನಿ ಪವಿತ್ರ.ಕೆ ಸ್ವಾಗತಿಸಿ, ಮೇಘಾ.ಎಸ್ ವಂದಿಸಿದರು. ಪ್ರಾಶ್ಯಾ.ಜಿ ಕಾರ್ಯಕ್ರಮವನ್ನು ನಿರೂಪಿಸಿದರು.