Friday, September 20, 2024
ಸುದ್ದಿ

ವಿವೇಕಾನಂದ ಎಂ.ಸಿ.ಜೆ ಯಲ್ಲಿ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಪ್ರಸ್ತುತ ಸಮಾಜದಲ್ಲಿ ಪತ್ರಿಕೆಗಳನ್ನು ಇ ಪೇಪರ್ ಅಥವ ವೆಬ್ ಸೈಟ್ ಮುಖಾಂತರ ಓದುವ ವರ್ಗ ಸೃಷ್ಟಿಯಾಗಿದೆ. ಜನ ದೃಶ್ಯ ಮಾಧ್ಯಮದತ್ತಲೂ ಸಾಕಷ್ಟು ಒಲವು ತೋರುತ್ತಿದ್ದಾರೆ. ಹಾಗಾಗಿಯೇ ಪತ್ರಿಕೆಗಳ ವೆಬ್ ಸೈಟ್‌ಗಳಲ್ಲೂ ವೀಡಿಯೋ ಸ್ಟೋರಿಗಳು ಜಾಗ ಪಡೆಯುತ್ತಿವೆ ಎಂದು ನೋಯ್ಡಾದ ಪತ್ರಕರ್ತ, ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಅಭಿಷೇಕ ಡಿ ಪುಂಡಿತ್ತೂರು ತಿಳಿಸಿದರು.

ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಬಾಗದ ಆಶ್ರಯದಲ್ಲಿ ಸೋಮವಾರ ನಡೆದ ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಅವಧಿ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಪತ್ರಿಕೋದ್ಯಮದ ವ್ಯಾಪ್ತಿ ವಿಸ್ತಾರವಾಗುತ್ತಿದೆ. ದಿನನಿತ್ಯದ ಚಟುವಟಿಕೆಗಳಲ್ಲಿ ನಿರತರಾಗಿರುವ ಹೆಚ್ಚಿನ ಯುವಜನತೆ ವೆಬ್‌ಸೈಟ್ ಮಾಧ್ಯಮದ ಕಡೆ ತಮ್ಮ ಒಲವನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಛಾಯಾಚಿತ್ರಣಕ್ಕಿಂತ, ವೀಡಿಯೋ ಸಂಬಂಧಿತ ಮಾಹಿತಿಗಳ ಕಡೆ ವಾಲುತ್ತಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ವೆಬ್‌ಸೈಟ್ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಅವಕಾಶವನ್ನು ಕಂಡುಕೊಳ್ಳಲಿದ್ದಾರೆ ಎಂದು ಹೇಳಿದರು.

ಜಾಹೀರಾತು

ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕಿ ಪ್ರಜ್ಞಾ ಬಾರ್ಯ ಹಾಗೂ ಸುಶ್ಮಿತಾ ಜಯಾನಂದ್ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ನಿರೂಪಿಸಿದರು.