Saturday, September 21, 2024
ದಕ್ಷಿಣ ಕನ್ನಡಮೂಡಬಿದಿರೆ

ಕೃಷಿ ಭೂಮಿಯಲ್ಲಿ ಹಾದು ಹೋಗಲಿರುವ 440ಕೆವಿ ವಿದ್ಯುತ್ ಲೈನ್ : ಕೃಷಿಕರಿಂದ ಹೋರಾಟದ ಎಚ್ಚರಿಕೆ- ಕಹಳೆ ನ್ಯೂಸ್

ಮೂಡುಬಿದಿರೆ: ಉಡುಪಿ ಜಿಲ್ಲೆಯ ಪಡುಬಿದಿರೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಎಳಿಂಜೆ, ನಿಡ್ಡೋಡಿ, ಮುಚ್ಚೂರು, ಎಡಪದವು ಮಂಗಳೂರು, ಮೂಡುಬಿದಿರೆ ಸೇರಿದಂತೆ ಬಂಟ್ವಾಳ, ಪುತ್ತೂರು ತಾಲೂಕುಗಳ ಮೂಲಕ ಕೇರಳಕ್ಕೆ ಹಾದು ಹೋಗಲಿರುವ 440 ಕಿಲೋ ವ್ಯಾಟ್ ವಿದ್ಯುತ್ ಲೈನ್ ಕಾಮಗಾರಿಗೆ ಜಿಲ್ಲೆಯ ಕೃಷಿಕರು ವಿರೋಧ ವ್ಯಕ್ತಪಡಿಸಿದ್ದು ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸಂಘದ ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು

ಪಡುಬಿದ್ರಿಯ ಅದಾನಿ ಕಂಪೆನಿ, ಸ್ಟೇರ್ಲಿಟ್ ಕಂಪೆನಿಯ ಗುತ್ತಿಗೆದಾರರು, ಗ್ರಾಮೀಣ ಪ್ರದೇಶದ ಪ್ರಕೃತಿದತ್ತ ಕೃಷಿ ಭೂಮಿ ಮಾಲಕರಲ್ಲಿ ಬಂದು ರೈತರ ಕೃಷಿ ಭೂಮಿಯನ್ನು ಪೊಲೀಸ್ ಬಲ ಬಳಸಿಕೊಂಡು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಈ ಭೂಮಿಯಲ್ಲಿ ಫಲವತ್ತಾದ ಕೃಷಿ ಚಟುವಟಿಕೆಗಳಿದ್ದರೂ ವಿದ್ಯುತ್ ಟವರ್‌ಗಳನ್ನು ಅಳವಡಿಸಿ ಜನತೆಗೆ ತೊಂದರೆಯಾಗುವ ರೀತಿಯಲ್ಲಿ ಕಾಮಗಾರಿಗಳನ್ನು ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು ವಿದ್ಯುತ್ ಕಂಪೆನಿಗಳು ಬಲಪ್ರಯೋಗಿಸಿ ಕೃಷಿ ಭೂಮಿಯಲ್ಲಿ ವಿದ್ಯುತ್ ಟವರ್ ಅಳವಡಿಸಲು ಮುಂದಾದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಅವರು ಎಚ್ಚರಿಸಿದ್ದಾರೆ.

ವಿದ್ಯುತ್ ಲೈನನ್ನು ಸಮುದ್ರ ಮಾರ್ಗದ ಮೂಲಕ ಕೊಂಡೊಯ್ಯಲು ಅವಕಾಶವಿದ್ದರೂ ಕೃಷಿ ಭೂಮಿಯಲ್ಲಿ ಕೊಂಡ್ಯೊಯ್ಯುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಮೂಡುಬಿದಿರೆ ತಾಲೂಕಿನ ಅಶ್ವಥಪುರ, ನಿಡ್ಡೋಡಿ ಮುಂತಾದ ಪ್ರದೇಶಗಳಲ್ಲಿ ಕೃಷಿಕರಿಗೆ ಆಮಿಷ ಒಡ್ಡಿ ಫಲವತ್ತಾದ ಅಡಿಕೆ ಗಿಡಗಳನ್ನು ಕಡಿಯಲು ಪ್ರೇರೆಪಿಸಿರುವುದಾಗಿ ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮಕೈಗೊಂಡು ತುಳುನಾಡಿನ ಕೃಷಿ ಭೂಮಿಯನ್ನು ಉಳಿಸಿಕೊಡಬೇಕೆಂದು ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿಸೋಜಾ ಆಗ್ರಹಿಸಿದರು. ಏಳಿಂಜೆ ಹೋರಾಟ ಸಮಿತಿಯ ಸುಕೇಶ್ಚಂದ್ರ ಶೆಟ್ಟಿ, ನಡಿಕಂಬಳಗುತ್ತು ಶ್ರೇಯಸ್ ರಾಜ್ ಶೆಟ್ಟಿ ಪೂರಕ ಮಾಹಿತಿ ನೀಡಿದರು.