Saturday, November 23, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ:  ದ.ಕ. ಜಿಲ್ಲೆಯಲ್ಲಿ  ಡೆಂಗ್ಯೂ ಜ್ವರಕ್ಕೆ ಮೊದಲ ಬಲಿ – ಕಹಳೆ ನ್ಯೂಸ್

ಬಂಟ್ವಾಳ: ಡೆಂಗ್ಯೂ ಜ್ವರಕ್ಕೆ ದ.ಕ. ಜಿಲ್ಲೆಯ ವ್ಯಕ್ತಿಯೋರ್ವನ ಪ್ರಥಮ ಬಲಿಯಾಗಿದೆ. ರಾಜ್ಯವೇ ಡೆಂಗ್ಯೂ ಹಾಟ್ ಸ್ಪಾಟ್ ಆಗಿ ಮಾರ್ಪಾಡು ಆಗಿದ್ದರು ಕೂಡ ಜಿಲ್ಲೆಯಲ್ಲಿ ಈವರೆಗೆ ಪ್ರಾಣ ಹಾನಿಯಾಗಿರಲಿಲ್ಲ. ಇಂದು ಮೂಲತಃ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿಯಾಗಿದ್ದು,ಪ್ರಸ್ತುತ ಪುತ್ತೂರಿನಲ್ಲಿ ವಾಸವಾಗಿರುವ ಯತೀಶ್ ( 52) ಎಂಬಾತನನ್ನು ಡೆಂಗ್ಯೂ ಜ್ವರ ಬಲಿ ತೆಗೆದುಕೊಂಡಿದೆ.

ಅತಿಯಾದ ಜ್ವರದಿಂದ ಬಳಲುತ್ತಿದ್ದ ಯತೀಶ್ ಅವರು ಜುಲೈ 10 ರಂದು ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅದಾಗಲೇ ತೀವ್ರ ಜ್ವರಕ್ಕೆ ಈಡಾಗಿರುವ ಈತನನ್ನು ಐಸಿಯು ನಲ್ಲಿ ಚಿಕಿತ್ಸೆ ಗಾಗಿ ದಾಖಲಿಸಲಾಗಿತ್ತು ಎಂದು ಇಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಅದಾಗಲೇ ಪರಿಸ್ಥಿತಿ ಕೈ ಮೀರಿಹೋಗಿದ್ದು ಈತ ಚಿಕಿತ್ಸೆಗೆ ಸ್ಪಂದಿಸದ ಇರುವ ಕಾರಣದಿಂದ ಈತನನ್ನು ಅದೇ ದಿನ ಸಂಜೆ ವೇಳೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಸಲಾಗಿತ್ತು.
ಆದರೆ ಈದಿನ ಚಿಕಿತ್ಸೆಗೆ ಸ್ಪಂದಿಸದೆ ಈತ ಕೊನೆಯುಸಿರೆಳೆದಿದ್ದಾನೆ ಎಂದುಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತಃ ಶಂಭೂರು ಗರಡಿ ನಿವಾಸಿಯಾಗಿರುವ ಯತೀಶ್ ಅವರು ಇತ್ತೀಚಿಗೆ ಪತ್ನಿಯ ತವರೂರು ಪುತ್ತೂರಿನಲ್ಲಿ ಮನೆ ಮಾಡಿ ಅಲ್ಲಿ ವಾಸವಾಗಿದ್ದರು.
ಭಾರತ್ ಬೀಡಿ ಕಂಪೆನಿಯ ಬಿಸಿರೋಡಿನ ಶಾಖೆಯಲ್ಲಿ ಸಿಬ್ಬಂದಿಯಾಗಿದ್ದ ಇವರು ಜ್ವರದ ಸಂಧರ್ಭದಲ್ಲಿ ಅಲ್ಲಿಯ ಜೊತೆಗಾರ ಸಿಬ್ಬಂದಿ ಜೊತೆ ಬಂಟ್ವಾಳ ಆಸ್ಪತ್ರೆಗೆ ದಾಖಲಾಗಿದ್ದರು. ಯತೀಶ್ ಅವರು ಉತ್ತಮ ಗುಣನಡತೆಯಿಂದ ಶಂಭೂರು ಗ್ರಾಮದಲ್ಲಿ ಚಿರಪರಿಚಿತರಾಗಿದ್ದರು. ಪತ್ನಿ ಹಾಗೂ ಎರಡು ಹೆಣ್ಮಕ್ಕಳು ಸಹಿತ ಅಪಾರ ಗೆಳೆಯರನ್ಬು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು