Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಫರಂಗಿಪೇಟೆ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ 16ವರ್ಷಗಳಿಂದ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶಶಿಮಂಗಳ ವೈ ಅವರಿಗೆ ಬೀಳ್ಕೊಡುಗೆ ಸಮಾರಂಭ – ಕಹಳೆ ನ್ಯೂಸ್

ಬಂಟ್ವಾಳ: ಫರಂಗಿಪೇಟೆ ಸಮೀಪದ ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ 16 ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಶಶಿಮಂಗಳ ವೈ. ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಶಿಕ್ಷಕಿ ಹೇಗಿರಬೇಕು ಎಂಬುದನ್ನು ಶಶಿಮಂಗಳ ಮೇಡಂ ತೋರಿಸಿಕೊಟ್ಟಿದ್ದು, ಶಾಲೆಯ ವಾತಾವರಣ ಚೆನ್ನಾಗಿದ್ದಾಗ ಶಿಕ್ಷಕರಿಂದ ಉತ್ತಮ ಕಾರ್ಯವೈಖರಿಯನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಶಶಿಮಂಗಳ ಅವರ ಸೇವೆಯನ್ನು ಇಡೀ ಶಾಲೆ ಸ್ಮರಿಸಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿವೃತ್ತ ಮುಖ್ಯಶಿಕ್ಷಕಿ ಶಶಿಮಂಗಳ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಗೀತಾ, ನಿವೃತ್ತ ಶಿಕ್ಷಕ ಮಹಮ್ಮದ್ ತುಂಬೆ ಹಾಗೂ ಶಿಕ್ಷಕರಾದ ಮಮತಾ, ಹರಿಪ್ರಸಾದ್, ಹಿಲ್ಡಾ, ಜ್ಯೋತಿ, ಬೀನಾ, ಮನೋಹರ್ ಅವರು ನಿವೃತ್ತರ ಕುರಿತು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಪುದು ಗ್ರಾ.ಪಂ.ಅಧ್ಯಕ್ಷೆ ರಶೀದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಮಾಜಿ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ, ಪ್ರಕಾಶ್ಚಂದ್ರ ರೈ ದೇವಸ್ಯ, ಮಾಜಿ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ವಿಷುಕುಮಾರ್, ಆತಿಕಾ, ಮಮ್ತಾಜ್, ರೆಹಾನ, ಮಾಜಿ ಸದಸ್ಯರಾದ ಭಾಸ್ಕರ ರೈ, ಕಿಶೋರ್ ಕುಮಾರ್, ಉದ್ಯಮಿ ಎಫ್.ಎಂ.ಬಶೀರ್ ಫರಂಗಿಪೇಟೆ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಮೆಂಡೊನ್ಸಾ, ಎಸ್.ಡಿ.ಎಂ.ಸಿ ಸದಸ್ಯರಾದ ಝುಬೇರ್, ಚಂದ್ರಾವತಿ, ಭಾಸ್ಕರ, ಟುಡೇ ಪೌಂಢೇಶನ್ ಸದಸ್ಯ ಮಜೀದ್ ಉಪಸ್ಥಿತರಿದ್ದರು. ಶಿಕ್ಷಕ ಜಯಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.