ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಗೆ ದೂರು ಲೋಕಾಯುಕ್ತ & ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಿದ್ದರಾಮಯ್ಯ & ಮೂಡ ಕಮಿಷನರ್ ವಿರುದ್ಧ ದೂರು ಮಲ್ಲಿಕಾರ್ಜುನ್ ರಾಜು ಎಂಬುವವರಿಂದ ದೂರು ದಾಖಲು
ಜುಲೈ ಹತ್ತರಂದು ಮೈಸೂರಿನ ಲೋಕಾಯುಕ್ತರಿಗೆ ದೂರು ದಾಖಲು ಜಮೀನು ಹಂಚಿಕೆ ವಿಚಾರದಲ್ಲಿ ವಂಚನೆಯಾಗಿದೆಂದು ದೂರು ಈ ಬಗ್ಗೆ ತನಿಖೆ ಮಾಡುವಂತೆ ಲೋಕಾಯುಕ್ತಗೆ ದೂರು..!
ಆಯೋಗಕ್ಕೆ ದೂರು ಯಾಕೆ?
ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಿಎಸ್ ಕೃಷ್ಣಮೂರ್ತಿಯವರ 2 ಎಕರೆ ಜಾಗ ಇದೆ ಆ ಜಾಗವನ್ನ ಕೆ ಐ ಎ ಡಿ ಬಿ ತಮ್ಮ ವಶಕ್ಕೆ ತೆಗೆದುಕೊಂಡಿತ್ತು ಅದರ ಬದಲಾಗಿ ಕೇವಲ 1780 ಚದರ ಮೀಟರ್ ಬದಲೀ ಜಾಗ ನೀಡಲಾಗಿದೆ ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ ಭೂಮಿ ವಶಪಡಿಸಿಕೊಂಡ ಜಾಗದಲ್ಲಿ/ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು ವಿಜಯನಗರದಲ್ಲಿ ಬದಲಿ ಭೂಮಿ ಕೊಡಲಾಗಿದೆ
50:50 ಅನುಪಾತ ನಿಯಮವನ್ನ ದುರುಪಯೋಗಮಾಡಿಕೊಂಡಿದ್ದಾರೆ 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿದ್ದೇಕೆ ಎಂಬುದು ದೂರುದಾರರ ಪ್ರಶ್ನೆ ಸಿಎಂ ಪತ್ನಿಗೆ 50:50ಅನುಪಾತದಲ್ಲಿ ಬದಲಿ ಜಾಗ ಕೊಡ್ಲಾಗುತ್ತೆ ಬಿಎಸ್ ಕೃಷ್ಣಮೂರ್ತಿಯವರ 2 ಎಕರೆ ಜಾಗವನ್ನ ವಶಕ್ಕೆ ಪಡೆದು ಕೇವಲ 1780 ಸ್ಕ್ವಾರ್ ಮೀಟರ್ ಜಾಗ ನೀಡಿದ್ಯಾಕೆ? ಸಿಎಂ ಪತ್ನಿಗೊಂದು ನ್ಯಾಯ? ಬಿ.ಎಸ್ ಕೃಷ್ಣಮೂರ್ತಿಗೊಂದು ನ್ಯಾಯನ? ಇಲ್ಲಿ ತಾರತಮ್ಯ ಧೋರಣೆ ಎದ್ದು ಕಾಣ್ತಿದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಒಬ್ಬೊಬ್ಬರಿಗೆ ಒಂದೊಂದುರೀತಿಯ ಕಾನೂನಿದ್ಯಾ? ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಹಾರ ಯಾಕೆ? ಈ ಬಗ್ಗೆ ಸೂಕ್ತ ತನಿಖೆಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಲೋಕಾಯುಕ್ತಗೆ ದೂರು ಯಾಕೆ?
ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತೆ ಈ ಜಾಗವನ್ನು ಸಿದ್ದರಾಮಯ್ಯ ಪತ್ನಿಗೆ ದಾನ ಪತ್ರದ ಮೂಲಕ ಸಹೋದರ ಕೊಟ್ಟಿದ್ದರು ಆದ್ರೆ ಈ ಜಾಗ ದಲಿತರಿಗೆ ಸೇರಿದ್ದಾಗಿದೆ ಅದನ್ನ ಕಬಳಿಸಲಾಗಿದೆ ಅನ್ನೋದು ದೂರುದಾರರ ವಾದ ನಂತರ ಅದನ್ನ ದಾನದ ಮೂಲಕ ಸಹೋದರ ಸಿಎಂ ಮಡದಿಗೆ ಕೊಡಲಾಗಿದೆಯಂತೆ ಇದು ಬೇನಾಮಿ ಆಸ್ತಿ ಎಂದು ಆರೋಪ ಹೀಗಾಗಿ ಲೋಕಾಯುಕ್ತಗೆ ದೂರು ಕೊಟ್ಟವರ ವಾದ ಈ ಬಗ್ಗೆ ತನಿಖೆ ಮಾಡುವಂತೆ ಲೋಕಾಯುಕ್ತರಿಗೆ ದೂರು ಸಿದ್ದರಾಮಯ್ಯ ತನ್ನ ರಾಜಕೀಯ ಅಧಿಕಾರ ಬಳಸಿ ಈ ರೀತಿ ಮಾಡ್ಸಿದ್ದಾರೆ ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡ್ಬೇಕೆಂದು ದೂರುದಾರರ ಆಗ್ರಹ
ದೂರುದಾರರು ಹೇಳೋದ್ಹೇನು?
ಯಾವುದೇ ಜಾಗವನ್ನ ಭೂ ಬಲಾವಣೆ ಮಾಡ್ಬೇಕಾದ್ರೆ ಮೊದಲು ಪೇಪರ್ ನೊಟಿಫಿಕೇಷನ್ ಮಾಡ್ಬೇಕು ಇಂತಹ ವ್ಯವಸಾಯದ ಭೂಮಿಯನ್ನ ರೆಸಿಡೆನ್ಸಿಯಲ್ ಪರ್ಪಸ್ ಗೆ ಬದ್ಲಾಯಿಸ್ತಿದ್ದೇವೆ ಈ ಬಗ್ಗೆ ಯಾರಿಗಾದ್ರೂ ವಿರೋಧ ಇದ್ರೆ ಅಬ್ಜೆಕ್ಷನ್ ಸಬ್ಮಿಟ್ ಮಾಡಬೇಕೆಂದು ಮೂಡಾದವರು ಪೇಪರ್ ನೊಟಿಫಿಕೇಷನ್ ಕೊಡ್ಬೇಕು ನೊಟಿಫಿಕೇಷನ್ ಕೊಟ್ಮೇಲೆ ಡಿಸಿ ಕನ್ವರ್ಷನ್ ಮಾಡ್ಕೋಬೇಕು ಈ ಎಲ್ಲಾ ಪ್ರೊಸಿಜರ್ ಮುಗಿದ್ಮೇಲೆ ಲೇಔಟ್ ನಿರ್ಮಾಣ ಮಾಡ್ಬೇಕು ಬಟ್ ಇಲ್ಲಿ ಪೇಪರ್ ನೊಟಿಫಿಕೇಷನ್ ವಿಚಾರದಲ್ಲಿಯೇ ಸಾಕಷ್ಟು ಅನುಮಾನ ಇದೆ ಈ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಲೋಕಾಯುಕ್ತಗೆ
ದೂರುದಾರರ ಆಗ್ರಹವೇನು?
ದಲಿತರ ಭೂಮಿಯನ್ನ ಬೇರೆಯವರಿಗೆ ಪರಭಾರೆ ಮಾಡಲು ಅವಕಾಶ ಇದ್ಯಾ? ಕೆಸರೆ ಗ್ರಾಮದ ಸರ್ವೆ 464 ನಂಬರ್ ಈಗ್ಲೂ ಸಿಎಂ ಮಡದಿ ಹೆಸರಲ್ಲಿ ಬರ್ತಿದೆ ಅದರ ಸುತ್ತ ಮುತ್ತಲ್ಲಿ ಸ್ವಾಧೀನವಾದ ಭೂಮಿ ಸರ್ವೆನಂಬರ್ ಮೂಡ ಹೆಸರಿನಲ್ಲಿದೆ ಮೂಡದವರು ಸ್ವಾಧೀನ ಮಾಡ್ಕೊಂಡಿದ್ರೆ ಎಲ್ಲವನ್ನೂ ಮಾಡ್ಬೇಕಿತ್ತು ಬಿಟ್ಟು ಬಿಟ್ರೆ ಎಲ್ಲಾ ಜಾಗವನ್ನ ಬಿಡ್ಬೇಕಿತ್ತು ಆದ್ರೆ ಆ ಜಾಗವನ್ನ ಬಿಟ್ಟು ಉಳಿದ ಜಾಗವನ್ನಸ್ವಾಧೀನಪಡಿಸಿಕೊಂಡಿದ್ದು ಎಷ್ಟು ಸರಿ? ಇಲ್ಲಿ ಕೂಡ ತಾರತಮ್ಯ ಧೋರಣೆ ಎದ್ದು ಕಾಣ್ತಿದೆ ಈ ಬಗ್ಗೆ ಕೂಡ ಲೋಕಾಯುಕ್ತ ಕೂಲಂಕಷವಾಗಿ ತನಿಖೆ ಮಾಡ್ಬೇಕೆಂದು ದೂರು