Monday, January 20, 2025
ಸುದ್ದಿ

ಮಂಜೇಶ್ವರ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯಿಂದ ಸಹಾಯ ಹಸ್ತ – ಕಹಳೆ ನ್ಯೂಸ್

ಮಂಜೇಶ್ವರ:- ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ಮಂಜೇಶ್ವರ ಇದರ ನವೆಂಬರ್ ತಿಂಗಳ 19 ನೇ ಯೋಜನೆ ಸಹಾಯ ಹಸ್ತವನ್ನು ಉಪ್ಪಳ ಬಳಿಯ ಮುಳಿಂಜ ಮಹಾ ನಗರ ನಿವಾಸಿ ದಿವಂಗತ ಪದ್ಮನಾಭ ಭಂಡಾರಿಯವರ ಪುತ್ರಿ ಚಿ. ಸೌ ಪೂರ್ಣಿಮಾರ ವಿವಾಹಕ್ಕೆ ನೀಡಲಾಯಿತು.

ಪಾನ್ ಬೀಡ ಅಂಗಡಿ ಹೊಂದಿದ ಪಧ್ಮನಾಭರವರು ನಿಧನರಾದ ಬಳಿಕ ಪತ್ನಿ ವಿಜಯಲಕ್ಷಿ ತಮ್ಮ 3 ಹೆಣ್ಣು ಮಕ್ಕಳ ಜೊತೆ ಕಷ್ಟ ಪಟ್ಟು ಜೀವಿಸುತ್ತಿದ್ದರು. ಇದೀಗ ಪ್ರಾಯ ಪೂರ್ತಿ ಅದ ಹಿರಿಯ ಮಗಳಿಗೆ ಪೆರ್ಲ ನಿವಾಸಿ ಜೊತೆ ಈ ತಿಂಗಳ 9 ರಂದು ಮದುವೆ ಮಾಡಿಸಲಾಗುತಿದ್ದು, ಇವರ ಸಂಕಷ್ಟಕ್ಕೆ ಜೈ ಶ್ರೀ ರಾಮ್ ನೆರವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನ ನಿನ್ನೆ ಸಂಜೆ ಮನೆಗೆ ತೆರಳಿ ನೀಡಲಾಯಿತು. ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಶ್ರೀ ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡರವರು ಹಿಂದೂ ಸಂಸ್ಕೃತಿ ಪ್ರಕಾರ ಗೋದೂಳಿ ಮುಹೂರ್ತದಲ್ಲಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಹಾಯ ಹಸ್ತವನ್ನ ಪೂರ್ಣಿಮಾರ ಉಪಸ್ಥಿತಿಯಲ್ಲಿ ಅವರ ಹೆತ್ತವರಿಗೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಗೌರವ ಸಲಹೆಗಾರರಾದ:- ಗಿರಿ ವೀರನಗರ, ತುಳಸಿದಾಸ್ ಮಂಜೇಶ್ವರ, ದೀಪಕ್ ರಾಜ್ ಉಪ್ಪಳ, ಪ್ರಧಾನ ಸಂಚಾಲಕ :- ಸುಖೇಶ್ ಬೆಜ್ಜ, ಅಧ್ಯಕ್ಷ:- ರತನ್ ಕುಮಾರ್ ಹೊಸಂಗಡಿ, ಸದಸ್ಯರಾದ:- ಸತ್ಯ ವೀರ ನಗರ, ರೂಪೇಶ್ ಜೋಡುಕಲ್ಲು, ಕಿಶೋರ್ ಭಗವತೀ, ಗುರು ಕಿರಣ್ ಆಚಾರ್ಯ ಕಾಳಿಕಾಂಬ ಮೊದಲಾದವರು ಉಪಸ್ಥಿತರಿದ್ದರು.