Sunday, January 19, 2025
ಸುದ್ದಿ

ಪಂದ್ಯಕ್ಕೆ ಮೊದಲು ವಿಶೇಷ ರೀತಿಯಲ್ಲಿ ದೀಪಾವಳಿ ಆಚರಿಸಿರುವ ವಿರಾಟ್ ಕೊಹ್ಲಿ – ಕಹಳೆ ನ್ಯೂಸ್

ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ದ ಐದನೇ ಪಂದ್ಯಕ್ಕೆ ಸಜ್ಜಾಗಿರುವ ಜೊತೆಗೆ ಪಂದ್ಯಕ್ಕೂ ಮುನ್ನ ದಿನಾ ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.

ತಿರುವನಂತಪುರದಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನಾ ದಿನ ಮಾನ್ಯವಾರ್ ಜಾಹೀರಾತಿಗೆ ಸಂಬಂಧಿಸಿದಂತೆ ಬಡ ಮಕ್ಕಳೊಂದಿಗೆ ದೀಪಾವಳಿ ಆಚರಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಡ ಮಕ್ಕಳೊಂದಿಗೆ ಶೇರ್ವಾನಿಯಲ್ಲಿ ಕೊಹ್ಲಿ ಮಿಂಚಿದ್ದು, ದೀಪಾವಳಿಯ ದೀಪಗಳಿಗಿಂತ ಈ ಮಕ್ಕಳಲ್ಲಿ ಹೆಚ್ಚು ಹೊಳಪಿದೆ ಎಂದು ಬರೆದುಕೊಂಡಿರುವ ಕೊಹ್ಲಿ, ಈ ಮಕ್ಕಳೊಂದಿಗೆ ಸಮಯ ಕಳೆದದ್ದು ಅವಿಸ್ಮರಣೀಯ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜಾಹೀರಾತಿನಲ್ಲಿ ಕೊಹ್ಲಿಯೊಂದಿಗೆ ಉಮೇಶ್ ಯಾದವ್, ಸತ್ನಾಂ ಸಿಂಗ್, ಮನ್ಜೋತ್ ಕಲ್ರ ಸೇರಿದಂತೆ ಗಾಯಕ ಅರ್ಮಾನ್ ಮಲಿಕ್ ಕಾಣಿಸಿಕೊಂಡಿದ್ದಾರೆ.