Sunday, November 24, 2024
ಉಡುಪಿಕುಂದಾಪುರಸುದ್ದಿ

ಲಯನ್ಸ್ ಕ್ಲಬ್ ಕ್ರೌನ್‍ವತಿಯಿಂದ ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಕೃಷಿ ಮೇಳ-ಕಹಳೆ ನ್ಯೂಸ್

 ಕುಂದಾಪುರ :ರೈತವ್ಯಾಪ್ತಿ ವರ್ಗದವರಿಗೆ, ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಕ್ರೌನ್ ಆಯೋಜಿಸಿರುವುದು ಅಭಿನಂದನೀಯ. ಮುಖ್ಯವಾಗಿ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಇಂಥಹ ಕಾರ್ಯಕ್ರಮಗಳು ಪೂರಕವಾಗಬೇಕು. ಈ ಮೂರು ದಿನಗಳಲ್ಲಿ ಸುಮಾರು 20,000 ಗಿಡಗಳ ವ್ಯಾಪಾರ ಮಾರಾಟವಾಗಿರುವುದು ಕೇಳಿ ಸಂತೋಷವಾಯಿತು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕುಂದಾಪುರದ ನೆಹರು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಕೃಷಿ ಮೇಳ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲಯನ್ಸ್ ಕ್ಲಬ್ ಕ್ರೌನ್ ಅಧ್ಯಕ್ಷ ದಿನಕರ್ ಶೆಟ್ಟಿ ಮಾತನಾಡಿ, ಈ ಭಾಗದ ಕೃಷಿಕರಿಗೆ ವಿವಿಧ ತಳಿಯ ಹಲಸು ಮತ್ತು ಅದರ ಮೌಲ್ಯ ವರ್ಧಿತ ಉತ್ಪನ್ನಗಳ ಪರಿಚಯಕ್ಕಾಗಿ ಸಮಗ್ರ ಮಾಹಿತಿ ನೀಡುವುದು ಹಾಗೂ ಕುಂದಾಪುರದ ಸುತ್ತಮುತ್ತಲಿನ ಜನತೆಗೆ ಸಣ್ಣ ಜಾಗದಲ್ಲಿ ಬೆಳೆಸುವ ಗಿಡಗಳ ಬಗ್ಗೆ ಮಾಹಿತಿ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಹಾಗೂ ಕೇರಳದಿಂದ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಪರಿಚಯವಾಗಬೇಕು ಎಂಬ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಯಿತು. ಈ ಮೇಳದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್,ಲಯನ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ದ್ವಿತೀಯ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ಜಗದೀಶ್ ಶೆಟ್ಟಿ, ಕುದ್ರುಕೋಡು, ಅದ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ನಿಯೋಜಿತ ಅಧ್ಯಕ್ಷರಾದ ದಿನಕರ್ ಶೆಟ್ಟಿ, ಕಾರ್ಯದರ್ಶಿ ಶ್ರೀಧರ್ ಮರವಂತೆ, ಕೋಶಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು