Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ತಾಲೂಕು ಕ್ರೀಡಾಂಗಣ ಅಭಿವೃದ್ದಿಗೆ ಅನುದಾನ : ಶಾಸಕ ಅಶೋಕ್ ರೈಯವರಿಂದ ಸಿ‌ಎಂ ಗೆ ಮನವಿ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ತಾಲೂಕು ಕ್ರೀಡಾಂಗಣ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಮುಖ್ಯಮಂತ್ರಿ‌ಸಿದ್ದರಾಮಯ್ಯ ಅವರಿಗೆ‌‌ ಮನವಿ ಸಲ್ಲಿಸಿದ್ದಾರೆ.

ಸಿ .ಎಂ‌. ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದ ಶಾಸಕರು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಅಭಿವೃದ್ದಿ ಕೆಲಸಗಳು ನಡೆಯಬೇಕಿದೆ. ತಾಲೂಕು ಮಟ್ಟದ ಹಾಗೂ ಜಿಲ್ಲಾ‌ಮಟ್ಡದ ಕ್ರೀಡೆಗಳು ಇಲ್ಲಿ‌ನಡೆಯುತ್ತಿದೆ. ಕಳೆದ ವರ್ಷದ ರಾಜ್ಯಮಟ್ಟದ ಕ್ರೀಡಾಕೂಟವು ಇದೇ ಕ್ರೀಡಾಂಗಣದಲ್ಲಿ‌ ನಡೆದಿತ್ತು.‌ ಕ್ರೀಡಾಂಗಣದ‌ ಸುತ್ತ ಆವರಣಗೋಡೆ, ವೀಕ್ಷಕರ‌ ಗ್ಯಾಲರಿ‌ ಹಾಗೂ‌ ಸಿಂಥೆಟಿಕ್ ಟ್ರ್ಯಾಕ್ ಇದರ ಅಗತ್ಯತೆ ಇರುತ್ತದೆ. ಹಲವಾರು‌ ವರ್ಷಗಳಿಂದ ಕ್ರೀಡಾಪಟುಗಳು, ಹಾಗೂ ಸಾರ್ವಜನಿಕರಿಂದ ಇದರ ಅಭಿವೃದ್ದಿಗೆ ಬೇಡಿಕೆ ಇದ್ದರೂ ಅಭಿವೃದ್ದಿ ಕೆಲಸಗಳು ಸಾಕಷ್ಟು ಬಾಕಿ ಇರುತ್ತದೆ ಎಂದು ಸಿದ್ದರಾಮಯ್ಯರವರ ಬಳಿ‌ ಶಾಸಕರು‌ ಮನವಿ‌ಮಾಡಿದ್ದಾರೆ.‌ ಅನಿದಾನ ಒದಗಿಸುವ ಬಗ್ಗೆ ಸಿದ್ದರಾಮಯ್ಯರವರು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು