Saturday, November 23, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ಎಕೊಲೇಡ್ ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇದರ ವೆಬ್ ಸೈಟ್‌ನ್ನು ಪೊಲೀಸ್ ಕಮಿಷನರ್ ಶ್ರೀ ಅನುಪಮ್ ಅಗರವಾಲ್ ಅವರು ಉದ್ಘಾಟಿಸಿದರು -ಕಹಳೆ ನ್ಯೂಸ್

ಮಂಗಳೂರು :ಎಕೊಲೇಡ್ ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇದರ ವೆಬ್ ಸೈಟ್ ಇಂದು ಮಂಗಳೂರಿನ ಪೊಲೀಸ್ ಕಮೀಷನರ್ ಆಫೀಸಿನಲ್ಲಿ ಅನಾವರಣಗೊಂಡಿತು . ಈ ವೆಬ್ ಸೈಟ್’ನ ಉದ್ಘಾಟನೆಯನ್ನು ಮಂಗಳೂರು ಪೊಲೀಸ್ ಕಮಿಷನರ್ ಶ್ರೀ ಅನುಪಮ್ ಅಗರವಾಲ್ ಅವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಮಾತಾಡಿದ ಅವರು ಎಕೊಲೇಡ್ ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಾಫ್ಟ್ ವೇರ್ ಕಂಪನಿ’ಗೆ ಶುಭ ಹಾರೈಕೆ ನೀಡಿ, ಸೈಬರ್ ಸೆಕ್ಯೂರಿಟಿ’ನಲ್ಲಿ ಡೀಪ್ ಫೇಕ್ ವೀಡಿಯೋಸ್’ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ಲಾಘಿಸಿದರು. ಬಗ್ಗೆ
ಎಕೊಲೇಡ್ ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ನ ಸ್ಥಾಪಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಹರೀಶ್ ನೀರ್ ಮಾರ್ಗ, ಟೀಮ್ ಲೀಡರ್ ಮನೋಜ್ ಕುಮಾರ್, ಸಿಬ್ಬಂದಿಗಳಾದ ರಚಿತಾ ಆಚಾರ್ಯ ಹಾಗೂ ವರ್ಷ ಆಚಾರ್ಯ ಇವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಕೊಲೇಡ್ ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಸೈಬರ್ ಸೆಕ್ಯೂರಿಟಿ ಹಾಗೂ ಹೆಲ್ತ್ ಕೇರ್ ಕ್ಷೇತ್ರದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಉಪಯೋಗಿಸಿ ಸಾಫ್ಟ್ ವೇರ್ ಡೆವೆಲಪ್ ಮಾಡುತ್ತಿದ್ದಾರೆ. 2017ರಲ್ಲಿ ಡೆಡ್ಲಿ ಬ್ಲೂ ವೇಲ್ ಚಾಲೆಂಜ್ ಗೇಮ್ ಎಂಬ ನಕಾರಾತ್ಮಕ ಗೇಮ್ ಜಗತ್ತಿಗೆ ಕಾಲಿಟ್ಟಾಗ ಅನೇಕ ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಎಕೊಲೇಡ್ ಟೆಕ್ ಸೊಲ್ಯೂಷನ್ಸ್ ಸಂಸ್ಥೆಯು, “ರೈಸ್ ಅಪ್” ಗೇಮ್ ಅನ್ನು ಜಗತ್ತಿಗೆ ಪರಿಚಯಿಸಿ, ಸಕಾರಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ಮೂಡುವಂತೆ ಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು