Friday, November 15, 2024
ದಕ್ಷಿಣ ಕನ್ನಡಬೆಂಗಳೂರುಮಂಗಳೂರುಸುದ್ದಿ

ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ : ಮಾಣಿಯಲ್ಲಿ ಬ್ಯಾರಿಕೇಟ್ ಅಳವಡಿಸಿ, ಬದಲಿ ಮಾರ್ಗದ ಸೂಚನೆ – ಕಹಳೆ ನ್ಯೂಸ್

ಕಳೆದೆರಡು ವಾರಗಳಿಂದ ರಾಜ್ಯದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದ, ಪ್ರಾಕೃತಿಕ ವಿಕೋಪಕ್ಕೆ ಅಲ್ಲಲ್ಲಿ ವಿಕೋಪಗಳು ಆನಾಹುತಗಳು ಸಂಭವಿಸುತ್ತಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಪ್ರತಾಪ ಹೆಚ್ಚಾಗಿದ್ದು ಆನಾಹುತಗಳ ಸರಮಾಲೆಯೇ ಇಲ್ಲಿ ಘಟಿಸುತ್ತಿದೆ. ಗುಡ್ಡ ಕುಸಿತ, ಭೂ ಕುಸಿತ, ನೆರೆ, ವಿದ್ಯುತ್ ಕಂಬ ಧರೆಗುರುಳುವುದು, ಮರಗಳು ಉರುಳುವುದು ಸದ್ಯ ಇಲ್ಲಿ ಸರ್ವೆ ಸಾಮಾನ್ಯ ಸಂಗತಿಯಾಗಿದೆ.

ಮಂಗಳೂರು ಮೈಸೂರನ್ನು ಸಂಪರ್ಕಿಸುವ ಮಾಣಿ – ಮೈಸೂರು ಹೆದ್ದಾರಿಯ ಕೊಡಗು ಜಿಲ್ಲೆಯ ಜೋಡುಪಾಲ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬುಧವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು – ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಡರಾತ್ರಿ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಎಂಬಲ್ಲಿ ನೋಡ ನೋಡುತ್ತಲೇ ಗುಡ್ಡ ಕುಸಿದು ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರಾಗಿದ್ದಾರೆ. ಹಲವು ಗಂಟೆಗಳ ಕಾಲ ಮಣ್ಣು ರಸ್ತೆಯಲ್ಲೆ ಬಿದ್ದಿದ್ದ ಹಿನ್ನಲೆ ಅಷ್ಟು ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸದ್ಯ ರಸ್ತೆಯಿಂದ ಮಣ್ಣು ತೆರವುಗೊಳಿಸಲಾಗಿದೆ. ಈ ಸಂದರ್ಭ ಆ ರಸ್ತೆಯಲ್ಲಿ ಆಗಮಿಸಿದ ವಾಹನಗಳು ಸಂಚರಿಸಲು ಸಾಧ್ಯವಾಗದೇ ಪರದಾಡಿದವು. ಇದರಿಂದ ರಸ್ತೆಯಲ್ಲಿ ಕಿಮೀ ಉದ್ದಕ್ಕೆ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಸದ್ಯ ಘನ ವಾಹನಗಳನ್ನು ಹೊರತು ಪಡಿಸಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಈ ರಸ್ತೆಯಲ್ಲಿ ಸಂಚಾರಿಸಲು ಬಿಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೇ ಶಿರಾಡಿ ಘಾಟ್ ರಸ್ತೆಯಲ್ಲಿರುವ ಘನ ವಾಹನಗಳು ಈಗಾಗಲೇ ಮಾರ್ಗ ಮಧ್ಯ ಇರುವುದರಿಂದ ಮಾಣಿಯಲ್ಲಿ ಬ್ಯಾರಿಕೇಟ್ ಅಳವಡಿಸಿರುವ ಪೊಲೀಸರು ಬದಲಿ ಮಾರ್ಗದ ಸೂಚನೆ ನೀಡಿದ್ದಾರೆ. ಸಕಲೇಶಪುರ, ಹಾಸನ, ಬೆಂಗಳೂರಿಗೆ ತೆರಳುವ ವಾಹನಗಳು ಮಡಿಕೇರಿ ಮೈಸೂರು ಮೂಲಕ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.