Wednesday, January 22, 2025
ಬೆಂಗಳೂರುಸುದ್ದಿ

ಪಂಚೆ ಹಾಕಿ ಮಾಲ್‌ಗೆ ಬಂದ ರೈತನಿಗೆ ಅಪಮಾನ : ಜಿಟಿ ಮಾಲ್​ ಬಂದ್ ​​: ರಾಜ್ಯ ಸರ್ಕಾರ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಸಿನಿಮಾ ನೋಡಲು ಪಂಚೆ ಹಾಕಿಕೊಂಡು ಬಂದ ಕಾರಣ ರೈತನಿಗೆ ಒಳಗಡೆ ಹೋಗೋದಕ್ಕೆ ಅವಕಾಶ ನೀಡಿಲ್ಲ. ಈ ಬಗ್ಗೆ ರೈತ ತೀವ್ರ ಅಸಮಾಧನ ಹೊರಹಾಕಿದ್ದು, ಸದ್ಯ ಈ ವಿಚಾರದಲ್ಲಿ ಸದನದಲ್ಲಿ ಚರ್ಚೆಯಾಗಿದೆ.

ಅನ್ನದಾತನಿಗೆ ಕೊಡುವ ಮರ್ಯಾದೆ ಕೊಡಬೇಕು. ಹೀಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿದ್ದು, ಇಂದು( ಜುಲೈ 18) ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭದಲ್ಲೇ ಜಿಟಿ ಮಾಲ್​ ವಿಚಾರವಾಗಿ ಚರ್ಚೆ ನಡೆಯಿತು. ರೈತನನ್ನು ಮಾಲ್ ಒಳಗಡೆ ಬಿಡದೆ ಅವಮಾನಿಸಲಾಗಿದೆ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒಕ್ಕೊರಲಿನಿಂದ ಧ್ವನಿ ಎತ್ತಿದರು.​

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ರೈತರಿಗೆ ಅವಮಾನ ಮಾಡಿದ ಮಾಲ್‌ ಸಿಬ್ಬಂದಿ ರೈತನಿಗೆ ಕ್ಷಮೆ ಕೇಳುವ ಮೂಲಕ ಸನ್ಮಾನ ಮಾಡಿದ್ದಾರೆ. ಮಾಲ್ ಸೆಕ್ಯುರಿಟಿ ಏಜೆನ್ಸಿ ಮೇಲೆ ಕ್ರಮ ಆಗಬೇಕು. ಮಾಲ್ ಮಾಲೀಕರ ಮೇಲೆ ಎಫ್​ಐಆರ್ ಆಗಬೇಕು ಎಂದು ಗುರುಮಿಠಕಲ್ ಕಾಂಗ್ರೆಸ್​ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು. ಬಳಿಕ ಮಾತನಾಡಿದ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸದನದಲ್ಲಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನಸಭೆಯಲ್ಲಿ ಸ್ಪೀಕರ್ ಮಾತನಾಡಿ, ಇದನ್ನ ಖಂಡಿಸಬೇಕು ಮಾಲ್‌ ವಿರುದ್ಧ ಕ್ರಮ ಆಗಬೇಕು. ಪಂಚೆ ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, ಅವನು ಎಷ್ಟೇ ದೊಡ್ಡವನಾಗಿರಲಿ ಆತನ ವಿರುದ್ಧ ಕ್ರಮ ಆಗಬೇಕು, ನಾನು ಇದನ್ನ ಖಂಡನೆ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶಿದ ಲಕ್ಷ್ಮಣ್‌ ಸವದಿ, ಇದನ್ನ ಖಂಡಿಸಿದರೆ ಸಾಕಾಗಲ್ಲ ಅವರ ವಿರುದ್ಧ ಕ್ರಮ ಆಗಬೇಕು. ಒಂದು ವಾರ ಪವರ್ ಕಟ್ ಮಾಡಿ ಎಂದು ಲಕ್ಷ್ಮಣ್ ಸವದಿ ಆಗ್ರಹಿಸಿದರು.

ಈ ವೇಳೆ ಪ್ರಕಾಶ್ ಕೋಳಿವಾಡ ಅವರು ಮಾತನಾಡಿ, ಆ ಮಾಲ್ ಮುಚ್ಚಿಸಬೇಕು. ಆ ರೈತನ ಜೊತೆಗೆ ನಾನು ಮಾತನಾಡಿದ್ದೇವೆ, ಆ ಮಾಲ್ ವರ್ತನೆಯನ್ನ ಯಾರೂ ಒಪ್ಪಲು ಸಾಧ್ಯವಿಲ್ಲ. ಮಾಲ್ ಬಂದ್ ಮಾಡಿಸುವ ಕೆಲಸ ಮಾಡಲಿ ಎಂದರು. ಈ ವೇಳೆ ಅಶೋಕ್ ಪಟ್ಟಣ್ ಮಾತನಾಡಿ, ಮಾಲ್ ದು ಮಾತ್ರ ಅಲ್ಲ ಸಭಾಧ್ಯಕ್ಷರೇ. ನಮ್ಮಲ್ಲಿರುವ ಅನೇಕ ಕ್ಲಬ್ ಗಳಲ್ಲೂ ಬಿಡಲ್ಲ, ಚಪ್ಪಲಿ ಹಾಕಂಗಿಲ್ಲ, ಬರ್ಮುಡಾ ಹಾಕ್ಕೊಂಡು ಹೋಗಂಗಿಲ್ಲ. ಅನೇಕ ರಿಸ್ಟ್ರಿಕ್ಷನ್ ಇದೆ. ಇದಕ್ಕೆಲ್ಲಾ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸದನದಲ್ಲಿ ಆಗ್ರಹಿಸಿದರು.

ಬಳಿಕ ವಿಧಾನಸಭೆ ಸಭಾಪತಿ ಯುಟಿ ಖಾದರ್​, ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಎಂದು ಸ್ಪಷ್ಟಪಡಿಸಿ ಎಂದು ಸಚಿವರಿಗೆ ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು, ದೇವೇಗೌಡ್ರು ಹೋದ್ರು ಈ‌ ಕ್ಲಬ್ ಅವ್ರು ಹಂಗೆ ಮಾಡ್ತಾರಾ..? ಮಾಡಲ್ಲ.. ಆ ರೀತಿ ಮಾಡಿದ್ರೆ ಏನಾಗತ್ತೆ ಅವರಿಗೆ ಗೊತ್ತಿದೆ. ಅದಕ್ಕೆ ಎಲ್ಲರಿಗೂ ಒಂದೇ ರೀತಿಯ ನಿಯಮ ಇರಬೇಕು. ಈ ಬಗ್ಗೆ ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಚರ್ಚೆ ಮಾತಾಡಿದ್ದೇವೆ. 7 ದಿನ ಜಿ.ಟಿ.ಮಾಲ್ ಮುಚ್ಚಿಸಲಾಗುತ್ತದೆ. ಕಾನೂನಿನಲ್ಲಿ ಅವಕಾಶ ಇದೆ ಎಂದಿದ್ದಾರೆ ಎಂದು ತಿಳಿಸಿದರು.