Saturday, January 18, 2025
ಕಾಪುಕೃಷಿಸುದ್ದಿ

ರೋಟರಿ ಕ್ಲಬ್ ಶಂಕರಪುರ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮ- ಕಹಳೆ ನ್ಯೂಸ್

ರೋಟರಿ ಕ್ಲಬ್ ಶಂಕರಪುರ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮವನ್ನು ಶಂಕರಪುರ ಫ್ರಾನ್ಸಿಸ್ ಡೆಸಾ ಮತ್ತು ಗಿರೀಶ್ ಆಚಾರ್ಯ ಇವರ ಮನೆಯ ಪರಿಸರದಲ್ಲಿ ಇಂದು ಕಾಪು ತಾಲೂಕು ತಹಸೀಲ್ದಾರರು ಆದ ಡಾ ಪ್ರತಿಭಾ ಆರ್ ಇವರು ಗಿಡ ನೆಡುವುದರ, ಮತ್ತು ಕೊಡುವ ಮೂಲಕ ಉದ್ಘಾಟನೆ ಮಾಡಿ, ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ರೋಟರಿ ಶಂಕರಪುರ ವತಿಯಿಂದ ಮಾನ್ಯ ತಹಸೀಲ್ದಾರ್ ರವರಿಗೆ ಮತ್ತು ಈ ಕಾರ್ಯಕ್ರಮಕ್ಕೆ ಗಿಡ ನೀಡಿ ತುಂಬು ಸಹಕಾರ ನೀಡಿದ ಸಂತೋಷ್ ಶೆಟ್ಟಿಗಾ‌ರ್ ಇವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಂಕರಪುರ ಅಧ್ಯಕ್ಷರು ಆದ ಮಾಲಿನಿ ಶೆಟ್ಟಿ ಇನ್ನಂಜೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಲಯ 5 ರ ಸಹಾಯಕ ಗವರ್ನರ್ ಆದ ಅನಿಲ್‌ ಡೆಸಾ ಮಾಜಿ ಸಹಾಯಕ ಗವರ್ನರ್ ಆದ ರೋ ನವೀನ್ ಅಮೀನ್, ರೋಟರಿ ಸ್ಥಾಪಕ ಸದಸ್ಯರು ಆದ ಯು.ನಂದನ್ ಕುಮಾರ್, ಕಾರ್ಯದರ್ಶಿ ಅನಿಲ್ಲಾ ನೋರೋನ್ನಾ ಮತ್ತು ರೋಟರಿಯ ಸದಸ್ಯರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು