ಗುತ್ತಿಗಾರು ಬಳಿಯ ಕಾಜಿಮಡ್ಕ ಎಂಬಲ್ಲಿ ಕಾರು ಮತ್ತು ಜೀಪು ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಅಲ್ಪ ಗಾಯವಾದ ಘಟನೆ ಜು.18 ರ ಸಂಜೆ ನಡೆದಿದೆ.
ಗುತ್ತಿಗಾರಿನಿಂದ ಪ್ರಸಾದ್ ಎಂಬವರು ತನ್ನ ಕಾರಿನಲ್ಲಿ ಸುಳ್ಯದಿಂದ ಗುತ್ತಿಗಾರು ಕಡೆ ಬರುತಿದ್ದು, ಅರಂತೋಡಿನವರ ವರೊಬ್ಬರ ಜೀಪು ಗುತ್ತಿಗಾರಿನಿಂದ ಸುಳ್ಯ ಕಡೆ ಹೋಗುತಿತ್ತೆನ್ನಲಾಗಿದೆ. ಕಾಜಿಮಡ್ಕ ಎಂಬಲ್ಲಿ ಪರಸ್ಪರ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರಿಗೆ ಸ್ವಲ್ಪ ಗಾಯವಾಗಿರುವುದಾಗಿದ್ದು, ಕಾರು, ಜೀಪ್ ಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.