Recent Posts

Friday, November 22, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಂಟ್ವಳ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಅಧ್ಯಯನ ಪ್ರವಾಸ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಳ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿ ಕೊಳ್ಳಲಾಯಿತು. ವಿವಿಧ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಮಿಯಾಪಾದೆ ಸೌಮ್ಯ ರವರ ಮಲ್ಲಿಗೆ ನಾಟಿ,,ಬೊಳ್ಳುರು ಸತೀಶ್ ರವರ ಹೈನುಗಾರಿಕೆ ಹಾಗೂ ಓಲೆ ಬೆಲ್ಲ ತಯಾರಿ, ವಾಸು ನಾಯ್ಕರವರ ತಿಂಡಿ ಘಟಕ, ಅಲ್ಲಿಪಾದೆ ರಘು ಪೂಜಾರಿ ಯವರ ಜನನಿ ಪ್ರೊಡಕ್ಟ್, ನಾವುರ ಜಲಜಾಕ್ಷಿ ಯವರ ಬ್ಯಾಗ್ ತಯಾರಿ, ನಾವುರ ಹೇಮಲತಾ ರವರ ರೊಟ್ಟಿ ತಯಾರಿ ಘಟಕ, ಭೇಟಿ ಮಾಡಿ ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಯಿತು.

ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಭೇಟಿ ಮಾಡಿ ಠಾಣಧಿಕಾರಿ ರಾಜೇಶ್ ಮತ್ತು ರೋಹಿತ್ ರವರು ಅಗ್ನಿ ಶಾಮಕದ ಬಗ್ಗೆ ಪ್ರಾತ್ಯೇಕ್ಷಯ ಮೂಲಕ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳಾ ಸಾಂತ್ವನ ಕೇಂದ್ರ ಬಂಟ್ವಳದ ಕೌನ್ಸಿಲರ್ ವಿದ್ಯಾರವರು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ಮಾಹಿತಿ ನೀಡಿದರು. ನಗರ ಪೊಲೀಸ್ ಸ್ಟೇಷನ್ ಬಿ ಸಿ ರೋಡ್ ಇಲ್ಲಿ ಭೇಟಿ ಮಾಡಿ ಮಹಿಳಾ ಕಾನೂನಿನ ಬಗ್ಗೆ ಹಾಗೂ ಪೊಲೀಸ್ ಸ್ಟೇಟಸ್ ನಲ್ಲಿ ಮಹಿಳೆಯರು ತಮಗೆ ಆಗುವ ಸಮಸ್ಯೆ ಗಳ ಬಗ್ಗೆ ದೂರು ಕೊಡುವ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನಡೆಯುವ ಸಮಸ್ಯೆ ಬಗ್ಗೆ ಮಾಹಿತಿಯನ್ನು ಪೊಲೀಸ್ ಅಧಿಕಾರಿ ಧನ್ಯರವರು ಮಾಹಿತಿ ನೀಡಿದರು. ಈ ಸಂಧರ್ಭ ವಿಜಯ ಹಾಗೂ ವಸಂತಿಯವರು ಸಹಕಾರ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜನಜಾಗೃತಿ ಸದಸ್ಯರು ಹಾಗೂ ಕೇಂದ್ರ ಒಕ್ಕೂಟ ಮಾಜಿ ಅಧ್ಯಕ್ಷರು ಸದಾನಂದ,ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.