ಕಾಪು ತಾಲ್ಲೂಕಿನಲ್ಲಿ ನೆರೆ ಹಾವಳಿ: ನೆರೆ ಸಂತ್ರಸ್ತರನ್ನು ರಕ್ಷಿಸಲು ಸ್ವತಃ ಬೋಟ್ ನಲ್ಲಿ ತೆರಳಿದ ತಹಶಿಲ್ದಾರ್ ಪ್ರತಿಭಾ ಆರ್ – ಕಹಳೆ ನ್ಯೂಸ್
ಕಾಪು ತಾಲ್ಲೂಕಿನ ಹಲವು ಕಡೆ ನೆರೆ ಹಾವಳಿ ಎದುರಾಗಿದೆ. ಪಾದೆಬೆಟ್ಟು ಗ್ರಾಮದಲ್ಲಿ 3 ಮನೆಗಳ 15 ಜನರನ್ನು, ಪಡುಬಿದ್ರಿಯ ಬಂಟರ ಭವನದ ಹಿಂಭಾಗದಲ್ಲಿ 3 ಜನ, ಹೆಜಮಾಡಿಯ ಶಿವನಗರದಲ್ಲಿ ಒಬ್ಬರು, ಪಡುಬಿದ್ರಿಯ ಕಲ್ಲಟ್ಟಿಯಲ್ಲಿ ಒಬ್ಬರನ್ನು ಸ್ಥಳಾಂತರಿಸಲಾಯಿತು.
ತಹಶಿಲ್ದಾರ್ ಪ್ರತಿಭಾ ಆರ್ ರವರು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಸ್ವತಃ ಫೀಲ್ಡಿಗೆ ಇಳಿದರು. ತಾವೇ ಸ್ವತಃ ಗೃಹರಕ್ಷಕ ಸಿಬ್ಬಂದಿಯೊಡನೆ ಬೋಟ್ ನಲ್ಲಿ ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ನೀರಿನ ಹರಿವು ಹೆಚ್ಚಾಗಿದ್ದರೂ ತಾವೇ ರಿಸ್ಕ್ ತೆಗೆದುಕೊಂಡು ಫೀಲ್ಡಿಗೆ ಇಳಿದು ಕೆಲಸ ಮಾಡಿದ್ದಾರೆ.
ಬರಲೊಪ್ಪದ ವೃದ್ಧರನ್ನು ಮನವೊಲಿಸಿದ ತಹಶಿಲ್ದಾರ್: ಕೆಲವು ವೃದ್ಧರು ನೆರೆ ಪೀಡಿತ ಮನೆಯಿಂದ ಬರಲೊಪ್ಪದಿದ್ದಾಗ ಅವರ ಮನ ಒಲಿಸಿ ಸುರಕ್ಷಿತ ಸ್ಥಳಕ್ಕೆ ತೆರಳಿದ ಹಲವು ವೃದ್ಧೆಯರು ತಹಶಿಲ್ದಾರ್ ಪ್ರತಿಭಾಗೆ ಹರಸಿ ಆಶೀರ್ವದಿಸಿದ್ದಾರೆ.
“ಈ ರೀತಿ ನಮ್ಮ ಮನೆಯ ಬಾಗಿಲಿಗೆ ತಹಶೀಲ್ದಾರ್ ಬಂದು ನಮ್ಮನ್ನು ರಕ್ಷಿಸುತ್ತಾರೆ ಎಂದು ನಾವು ಎಣಿಸಿರಲಿಲ್ಲ… ಇಂತಹ ತಹಶಿಲ್ದಾರ್ ಅಪರೂಪದವರು… ಇವರನ್ನು ಭಗವಂತ ಚನ್ನಾಗಿಟ್ಟಿರಲಿ.. ಇದು ಕಾಪು ತಾಲ್ಲೂಕಿನ ಭಾಗ್ಯ, ಇವರು ಇನ್ನೂ ಹೆಚ್ಚು ಕೆಲಸ ಮಾಡುವಂತಾಗಲಿ ಎಂದು ಆಶೀರ್ವದಿಸಿದ್ದಾರೆ.
ಮಾಧ್ಯಮದವರೊಡನೆ ಮಾತಾಡಿದ ಕಾಪು ತಾಲ್ಲೂಕು ತಹಶಿಲ್ದಾರ್ ಪ್ರತಿಭಾ ಆರ್ “ಸಂತ್ರಸ್ತರ ಸುರಕ್ಷೆ ನಮಗೆ ಅತಿ ಮುಖ್ಯ. ಯಾವುದೇ ಜೀವಹಾನಿಯಾಗದಂತೆ ನಾವು ಎಚ್ಚರಿಕೆ ವಹಿಸಿದ್ದೇವೆ. ನೆರೆ ಪರಿಸ್ಥಿತಿ ಎದುರಿಸಲು ಈ ಮೊದಲೇ ನಾವು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ಹಾಗಾಗಿ ನಾವು ತಕ್ಷಣ ಫೀಲ್ಡಿಗೆ ಇಳಿಯಲು ಸಾಧ್ಯವಾಯಿತು. ನಮ್ಮ ಕ್ಷೇತ್ರ ದ ಜನ ಪ್ರತಿ ನಿಧಿ ಗಳು ಸಾರ್ವಜನಿಕ ರು ಎಲ್ಲಾ ಅಧಿಕಾರಿ ಗಳ ಸಹಕಾರ ದಿಂದ ಕರ್ತವ್ಯ ನಿರ್ವಹಿಸುತ್ತಿರುವುದು, ಸರಕಾರ ಸಂಬಳ ನೀಡುದು ಮತ್ತು ಜವಾಬ್ದಾರಿ ನೀಡಿರಿದು ಆದ್ದರಿಂದ ಸಂತೋಷ ವಾಗಿ ಕಾಪುವಿಗಾಗಿ ಶ್ರಮಿಸುತ್ತನೇ ಎಂದರು ನಮ್ಮ ಸಿಬ್ಬಂದಿ ಸದಾ ಸನ್ನಧರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ಕ್ಷಣದಲ್ಲಿಯೂ ನೆರೆ ಹಾವಳಿಗೆ ತುತ್ತಾದವರು ನಮಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
ತಹಶಿಲ್ದಾರ್ ಪ್ರತಿಭಾ ರವರಿಗೆ ಮೆಚ್ಚುಗೆಯ ಮಾಹಾಪೂರ: ತಾಲ್ಲೂಕಿನ ಜನತೆ ಸ್ವತಃ ಫೀಲ್ಡ್ ಗೆ ಇಳಿದು ಮುಂಜಾವಿನಿಂದ ಸಂಜೆಯವರೆಗೂ ಸಮಯವನ್ನು ಲೆಕ್ಕಿಸದೆ, ಊಟ-ತಿಂಡಿಯೆಡೆಗೆ ಗಮನ ಕೊಡದೆ ಕರ್ತವ್ಯ ನಿರ್ವಹಿಸಿದ ತಹಶಿಲ್ದಾರ್ ಪ್ರತಿಭಾ ರವರಿಗೆ ಹರಸಿ ಹಾರೈಸಿದ್ದಾರೆ, ಇಂತಹ ತಹಶಿಲ್ದಾರ್ ನಮಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಕೊಂಡಾಡಿದ್ದಾರೆ. ಸದಾ ಜನರ ಕಷ್ಟಗಳಿಗೆ ಸ್ಪಂದಿಸುವ ತಹಶಿಲ್ದಾರ್ ಪ್ರತಿಭಾ ರವರಿಗೆ ಭಗವಂತ ಇನ್ನಷ್ಟು ಶಕ್ತಿ ನೀಡಲಿ ಎಂದು ಹರಸಿದ್ದಾರೆ