Sunday, January 19, 2025
ಕಾಸರಗೋಡುಸುದ್ದಿ

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಜು.21(ನಾಳೆ)ರಿಂದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಚತುರ್ಥ ಚಾತುರ್ಮಾಸ್ಯ ವೃತಾಚಾರಣೆ ಆರಂಭ – ಕಹಳೆ ನ್ಯೂಸ್

ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಜು.21(ನಾಳೆ)ರಿಂದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ಚತುರ್ಥ ಚಾತುರ್ಮಾಸ್ಯ ವೃತಾಚಾರಣೆ ಆರಂಭವಾಗಲಿದೆ.

ಚಾತುರ್ಮಾಸ್ಯ ವೃತಾಚಾರಣೆ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ , ಸಭಾಕಾರ್ಯಕ್ರಮ ನಡೆಯಲಿದೆ. ಇನ್ನು ಮಧ್ಯಾಹ್ನ ಉದುಮ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಎಚ್. ಕುಂಞಂಬು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾಕಾರ್ಯಕ್ರಮವನ್ನು ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಉದ್ಯಮಿ ಕೆ.ಕೆ. ಶೆಟ್ಟಿ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಹಾಗೂ ಪುತ್ತೂರು ವಿಧಾನಸಬಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ ಟಿ. ಶ್ಯಾಮ್ ಭಟ್., ಐಎಎಸ್, (ನಿ),ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭಾ ಕಾರ್ಯಕ್ರಮದ ಬಳಿಕ ಯೋಗಿಶ ಶರ್ಮ ಬಳ್ಳಪದವು ಇವರ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗಾಯನದಲ್ಲಿ ಯೋಗಿಶ ಶರ್ಮ ಬಳ್ಳಪದವು, ವಯಲಿನ್ ನಲ್ಲಿ ಮಾಞ್ಞೂರ್ ರಂಜಿತ್, ಮೃದಂಗದಲ್ಲಿ ಚೇರ್ತಲ ಜಿ ಕೃಷ್ಣಕುಮಾರ್, ಘಟಂ ನಲ್ಲಿ ಮಾಞ್ಞೂರ್ ಉಣ್ಣಿಕೃಷ್ಣನ್ , ಹಾಗೂ ತಬಲದಲ್ಲಿ ಕು| ರತ್ನಶ್ರೀ ಅಯ್ಯರ್ ವೈಕ್ಕಂ ಭಾಗವಹಿಸಲಿದ್ದಾರೆ.

ಬಳಿಕ ಬಡಗುತಿಟ್ಟಿನವರ ಕಾಳಿದಾಸ ದಾಕ್ಷಾಯಣಿ ಪ್ರಸಂಗ ಯಕ್ಷವೈಭವ ನೇರವೇರಲಿದ್ದು, ಭಾಗವತರಾಗಿ ಪ್ರಸನ್ನ ಭಟ್ ಬಾಳ್ಕರ್, ಮದ್ದಳೆಯಲ್ಲಿ ಶಶಾಂಕ ಆಚಾರ್ ಕಿರು ಮಂಜೇಶ್ವರ, ಚೆಂಡೆಯಲ್ಲಿ ರವಿ ಆಚಾರ್ ಕಾಡೂರು, ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಶ್ರೀಧರ್ ಭಟ್ ಕಾಸರಗೋಡು, ಕಾರ್ತಿಕ್ ಹೆಗ್ಡೆ ಚಿಟ್ಟಾಣಿ, ಹಾಗೂ ಸುಧೀರ್ ಉಪ್ಪೂರು ಉಪಸ್ಥಿತಲಿರಲಿದ್ದಾರೆ.