Sunday, January 19, 2025
ಸಿನಿಮಾಸುದ್ದಿ

ಕರಾವಳಿ ಬೆಡಗಿ ಸೋನಲ್‌ ಜೊತೆ ತರುಣ್‌ ರೊಮ್ಯಾಂಟಿಕ್‌ ಫೋಟೋಶೂಟ್‌ ; ಮದುವೆ ಬಗ್ಗೆ ಕೊಟ್ರು ಗುಡ್‌ ನ್ಯೂಸ್ – ಕಹಳೆ ನ್ಯೂಸ್

ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ (Tharun Sudhir)  ಮತ್ತು ಸೋನಲ್ (Sonal) ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಿಶೇಷ ಫೋಟೋಶೂಟ್ ಮೂಲಕ ಮದುವೆ ಬಗ್ಗೆ ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಪ್ಪು ಬಣ್ಣ ಮತ್ತು ಲೈಟ್ ಬಣ್ಣದ ಉಡುಗೆಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿ ಮದುವೆ ಬಗ್ಗೆ ಇಬ್ಬರೂ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ ವದಂತಿಗಳಿಗೆ ತರುಣ್ ಮತ್ತು ಸೋನಲ್ ತೆರೆ ಎಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಆಗಸ್ಟ್ 10ರಂದು ಸೋನಲ್ ಮತ್ತು ತರುಣ್ ಸುಧೀರ್ ಆರತಕ್ಷತೆ, ಆ.11ರಂದು ಮದುವೆ ನಿಶ್ಚಯವಾಗಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಈ ಜೋಡಿಯ ಮದುವೆ ಸಂಭ್ರಮ ಜರುಗಲಿದೆ.

ಅಂದಹಾಗೆ, ‘ರಾಬರ್ಟ್’ (Robert) ಸಿನಿಮಾ ಸೆಟ್‌ನಲ್ಲಿ ಸೋನಲ್ ಜೊತೆಗಿನ ಪರಿಚಯವೇ ಇಂದು ಮದುವೆಗೆ ಮುನ್ನುಡಿ ಬರೆದಿದೆ. ಇಬ್ಬರ ಮದುವೆಗೆ ಮುನ್ನುಡಿ ಬರೆದಿದ್ದೇ ದರ್ಶನ್. ಈಗ ಬದುಕಿನ ಹೊಸ ಹೆಜ್ಜೆ ಇಡೋದಕ್ಕೆ ಈ ಜೋಡಿ ರೆಡಿಯಾಗಿದ್ದಾರೆ. ಗುಡ್ ನ್ಯೂಸ್ ಕೊಟ್ಟಿರುವ ಈ ಕಪಲ್‌ಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.