Thursday, September 19, 2024
ಸುದ್ದಿ

2024ರ ಬಜೆಟ್ ‘ನವಯುಗ-ನವಪಥ’ ಕಾರ್ಯಸೂಚಿಗೆ ಮುನ್ನುಡಿಯಾಗಿದೆ. ವಿಕಸಿತ ಭಾರತಕ್ಕೆ ಈ ಬಜೆಟ್ ದಾರಿದೀಪವಾಗಲಿದೆ – ಕ್ಯಾಪ್ಟನ್ ಬ್ರಿಜೇಶ್ ಚೌಟ- ಕಹಳೆ ನ್ಯೂಸ್

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತದ ಕುರಿತು ಅವರಿಗಿರುವ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮೋದಿ 3.0 ನ ಸಂಕಲ್ಪ ಪತ್ರದಲ್ಲಿ ಮಾಡಲಾದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸಲು ಇಟ್ಟಿರುವ ಮೊದಲ ಹೆಜ್ಜೆಯಾಗಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡಕ್ಕೆ ಸಂಬಂಧಿಸಿದಂತೆ ಕೇಂದ್ರ ಬಜೆಟ್‌ನ ಒಂಬತ್ತು ಆದ್ಯತೆಗಳು ನಾನು ಹಾಕಿಕೊಂಡಿರುವ ಕಾರ್ಯಸೂಚಿ ‘ನವಯುಗ-ನವಪಥ’ಕ್ಕೆ ಪೂರಕವಾಗಲಿದೆ. ನಮ್ಮ 9 ಆದ್ಯತೆಗಳ ಗುರಿಯನ್ನು ಸಮರ್ಥವಾಗಿ ಪೂರ್ಣಗೊಳಿಸಲು ಈ ಬಜೆಟ್ ಸಹಕಾರಿಯಾಗಲಿದೆ.

ಜಾಹೀರಾತು

 

ಬಜೆಟ್ ನ ಒಂಬತ್ತು ಆದ್ಯತೆಗಳು:

 

1) ಕೃಷಿಯಲ್ಲಿನ ಉತ್ಪಾದಕತೆ ಮತ್ತು ಚೇತರಿಕೆ.

2) ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ

3) ಅಂತರ್ಗತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ

4) ಉತ್ಪಾದನೆ ಮತ್ತು ಸೇವೆಗಳು

5) ನಗರಾಭಿವೃದ್ಧಿ

6) ಇಂಧನ ಭದ್ರತೆ

7) ಮೂಲಸೌಕರ್ಯ

8) ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ

9) ಮುಂದಿನ ಪೀಳಿಗೆಯ ಸುಧಾರಣೆಗಳು

 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನ ದೃಷ್ಟಿಕೋನಕ್ಕೆ ಅನುಗುಣವಾಗಿ ಆಂತರಿಕ ಬೆಳವಣಿಗೆಗೆ ಸಹಕಾರಿಯಾಗುವ ಮೂಲಕ ವಿವಿಧ ವಲಯಗಳಿಗೆ, ವಿವಿಧ ಪ್ರದೇಶಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿ ಮಾಡಲು ಈ ಬಜೆಟ್ ಸಹಕಾರಿಯಾಗಲಿದೆ.

ಪಿ ಎಂ ನರೇಂದ್ರ ಮೋದಿ ಅವರು ಹೇಳಿದಂತೆ “ಇಂದಿನ ಬಜೆಟ್ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ದೃಢವಾದ ಅಡಿಪಾಯವನ್ನು ಹಾಕುತ್ತದೆ”. ಎಂಬ ಅವರ ಮಾತು ಭವ್ಯ ಭಾರತದ ಭವಿಷ್ಯವನ್ನು ರೂಪಿಸಲಿದೆ.

 

ಸ್ಟಾರ್ಟ್-ಅಪ್‌ಗಳು ಮತ್ತು ನಾವಿನ್ಯತೆ ಪರಿಸರದ ವ್ಯವಸ್ಥೆಯ ಮೇಲೆ ಗಮನ ಕೇಂದ್ರೀಕರಿಸುವುದು, MSME ಮತ್ತು ಉತ್ಪಾದನೆಗೆ ಬೆಂಬಲ ನೀಡುವುದು – ಉತ್ಪಾದನಾ ವಲಯದಲ್ಲಿ ಹೆಚ್ಚುವರಿ ಉದ್ಯೋಗಕ್ಕೆ ಸಹಾಯ ಮಾಡುವುದು, ನಗರಗಳನ್ನು ಬೆಳವಣಿಗೆಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ರಮ, ಮೊದಲ ಬಾರಿಗೆ ಉತ್ಪಾದನಾ ವಲಯಕ್ಕೆ ಉದ್ಯೋಗಿಗಳು ಪ್ರವೇಶ ಮಾಡಲು ಉತ್ತೇಜಿಸುವುದು ಮುಂತಾದವುಗಳ ಮೂಲಕ ಈ ಬಜೆಟ್ ಹೊಸ ದಾರಿಯನ್ನು ತೆರೆದಿದೆ.

 

ಯುವಕರಿಗೆ ಮತ್ತು ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಶೈಕ್ಷಣಿಕ ಸಾಲಗಳು, ಸೀಗಡಿ ಕೃಷಿ ಮತ್ತು ಸಂಸ್ಕರಣೆಗೆ ಬೆಂಬ, ತರಕಾರಿ ಉತ್ಪಾದನಾ ಕ್ಲಸ್ಟರ್, ಮುದ್ರಾ ಸಾಲ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಿರುವುದು, ಹೂಡಿಕೆಗೆ ಸಿದ್ಧವಾದ “ಪ್ಲಗ್ ಆಂಡ್ ಪ್ಲೇ”ಕೈಗಾರಿಕಾ ಪಾರ್ಕುಗಳ ಅಭಿವೃದ್ಧಿಯ ಪ್ರಯತ್ನಗಳು ನಮ್ಮ ಕ್ಷೇತ್ರದಲ್ಲಿಯೂ ಅಳವಡಿಸಿಕೊಂಡು ನಮ್ಮ ನವಪಥದ ಕಾರ್ಯ ಸೂಚಿಗೆ ಮೈಲುಗಲ್ಲಾಗಲಿದೆ‌.

 

ಮಾನ್ಯ ಪ್ರಧಾನ ಮಂತ್ರಿಗಳು ಹೇಳಿದಂತೆ “ಇಂದಿನ ಬಜೆಟ್ ಹೊಸ ಅವಕಾಶಗಳನ್ನು, ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ತಂದಿದೆ”. ಭಾರತವು ಸ್ವಯಂ ಚಾಲಿತ, ಸುಸ್ಥಿರ ಮತ್ತು ಸಮಗ್ರವಾಗಿ ಬೆಳೆದು ಜಗತ್ತಿಗೆ ಮಾದರಿಯಾಗಿ ವಿಶ್ವ ನಾಯಕನಾಗಲಿದೆ.

 

ಈ ಬಜೆಟ್ ನ ಪ್ರಯೋಜನಗಳನ್ನು ನಮ್ಮ ಕ್ಷೇತ್ರದಲ್ಲಿ ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎಂಬುದರ ಕುರಿತಾಗಿ ಮುಂದಿನ ದಿನಗಳಲ್ಲಿ ವಿಶೇಷವಾಗಿ ಗಮನಹರಿಸಲಾಗುವುದು.