Monday, January 20, 2025
ಉಡುಪಿಸುದ್ದಿ

ವಾರಿಸುದಾರರಿಲ್ಲದ ಶವದ ಸಂಸ್ಕಾರ ನೆರವೇರಿಸಿದ ವಿಶು ಶೆಟ್ಟಿ – ಕಹಳೆ ನ್ಯೂಸ್

ಉಡುಪಿ: ಕಳೆದ 4 ವರ್ಷಗಳಿಂದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದ ವೃದ್ಧರು ನಿಧನ ಹೊಂದಿದ್ದು, ಸಂಬಂಧಿಕರ ಪತ್ತೆಯಾಗದೆ ಇರುವುದರಿಂದ ವಿಶು ಶೆಟ್ಟಿಯವರು ವೃದ್ಧರ ಶವ ಸಂಸ್ಕಾರವನ್ನು ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ನೆರವೇರಿಸಿದರು.

ಮೃತ ವೃದ್ಧ ನಾಗಪ್ಪ ನಾಡಾರ್ (85), ಅವರ ಸಂಬಂಧಿಕರ ಪತ್ತೆಗೆ ಮಾಧ್ಯಮ ಪ್ರಕಟಣೆ ನೀಡಿದರೂ ಸಂಬಂಧಿಕರು ಪತ್ತೆ ಆಗಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಶವ ಸಂಸ್ಕಾರದಲ್ಲಿ ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲ ಹಾಗೂ ಆಶ್ರಮ ವಾಸಿಗಳು ಸಹಕರಿಸಿದರು. ಅಂಬಲಪಾಡಿ ಕೃಷ್ಣ ರವರು ಜೆ ಸಿ ಬಿ ನೀಡಿ ಸಹಕರಿಸಿದರು. ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು