Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ವಿಟ್ಲ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಸಭೆ : ಅಧ್ಯಕ್ಷರಾಗಿ ಸುಧೀರ್ ನಾಯ್ಕ್ ಆಯ್ಕೆ – ಕಹಳೆ ನ್ಯೂಸ್

ವಿಟ್ಲ : ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ವಿಟ್ಲ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ವಾರ್ಷಿಕಾ ಮಹಾಸಭೆಯು ವಿಟ್ಲದ ಹೊಟೇಲ್ ಪಂಚಮಿಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಸಂತ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ವಿಟ್ಲ ಇದರ ನೂತನ ಅಧ್ಯಕ್ಷರಾಗಿ ಸುಧೀರ್ ನಾಯ್ಕ್, ಉಪಾಧ್ಯಕ್ಷರಾಗಿ ಜಗದೀಶ್ ವಿ.ಆರ್, ಆನಂದ, ಕಾರ್ಯದರ್ಶಿಯಾಗಿ ಗಂಗಾಧರ , ಕೋಶಾಧಿಕಾರಿಯಾಗಿ ಜನಾರ್ಧನ ಪದ್ಮಶಾಲಿ ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್, ಅಶೋಕ, ಸುರೇಶ್ ಸಾಲಿಯಾನ್, ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುದರ್ಶನ ಪಡಿಯಾರ್, ಕೆ ವಸಂತ ಶೆಟ್ಟಿ, ಅಬೂಬಕ್ಕರ್, ಮೋಹನ, ಜಯರಾಮ್ ಬಳ್ಳಾಲ್, ರಾಜೇಶ್ ,ಸತ್ಯನಾರಾಯಣ, ಸದಾನಂದ ಗೌಡ, ಲೋಕರಾಜ.ವಿ.ಎಸ್, ರಮೇಶ್ ಆಚಾರ್ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಆ.31ರಂದು 47ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ನಡೆಸುವುದಾಗಿ ನಿರ್ಣಯಿಸಲಾಯಿತು. ಜನಾರ್ಧನ ಪದ್ಮಶಾಲಿ ವಂದಿಸಿದರು, ಗಂಗಾಧರ ಲೆಕ್ಕಪತ್ರ ಮಂಡಿಸಿದರು.