Sunday, November 24, 2024
ಸುದ್ದಿ

ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾದ ಮೈಸೂರಿನ ಯುವತಿ ಸಿ.ಟಿ. ಸುಪ್ರಿತಾ- ಕಹಳೆ ನ್ಯೂಸ್

ಮೈಸೂರು: ಭಾರತೀಯ ವಾಯು ಸೇನಾ ಪಡೆಯ ಕ್ಯಾಪ್ಟನ್ ಅಗಿರುವ ವಲ್ಲಭಾಯಿನಗರದ ಸಿ.ಟಿ. ಸುಪ್ರಿತಾ ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಆಯ್ಕೆಯಾಗಿದ್ದಾರೆ. ಸಿಯಾಚಿನ್‌ಗೆ ಕರ್ತವ್ಯ ನಿರ್ವಹಣೆಗೆ ಆಯ್ಕೆಯಾದ ಪ್ರಥಮ ಮಹಿಳಾ ಯೋಧೆ ಇವರು ಎನ್ನುವ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಂತನಾಗ್, ಜಬ್ಬಾಲ್ಟರ್, ಲೇಹ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಈಗ ಎತ್ತರದ ಯುದ್ಧಭೂಮಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಲಕಾಡು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿರುಮಲ್ಲೇಶ್ ಹಾಗೂ ನಿರ್ಮಲಾ ದಂಪತಿ ಪುತ್ರಿ ಸುಪ್ರಿತಾ, ನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಹಾಗೂ ಎನ್‌ಸಿಸಿಯಲ್ಲಿ ‘ಸಿ’ ಸರ್ಟಿಫಿಕೇಟ್ ಪಡೆದಿದ್ದಾರೆ.

2021ರಲ್ಲಿ ಸೇನಾ ಪಡೆಯಲ್ಲಿ ಲೆಪ್ಟಿನೆಂಟ್ ಅಗಿ ಆಯ್ಕೆಯಾದ ಇವರು ವಾಯು ಪಡೆಗೆ ನಿಯೋಜನೆಗೊಂಡರು. 2024ರಲ್ಲಿ ಪತಿ ಮೇಜರ್ ಜೆರ್ರಿ ಬ್ಲೇಜ್ ಅವರೊಂದಿಗೆ ರಾಜಪತ್ ಪರೇಡ್‌ನಲ್ಲಿ ಭಾಗವಹಿಸಿದ್ದರು.