Saturday, November 23, 2024
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರಿನಲ್ಲಿ ಹೈ ಬೀಮ್ ಲೈಟ್ ವಿರುದ್ಧ ಭರ್ಜರಿ ಕಾರ್ಯಾಚರಣೆ ; 5.86 ಲಕ್ಷ ರೂ. ದಂಡ ಸಂಗ್ರಹ – ಕಹಳೆ ನ್ಯೂಸ್

ಮಂಗಳೂರು, ಜುಲೈ 25: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೈ ಬೀಮ್ ಹಾಗೂ ಅತಿ ಹೆಚ್ಚು ಪ್ರಖರವಾಗಿ ಬೆಳಗುವ ಅಥವಾ ಕಣ್ಣುಕುಕ್ಕುವ ಎಲ್​ಇಡಿ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಜುಲೈ 15 ರಿಂದ 23 ರವರೆಗೆ 1170 ಪ್ರಕರಣಗಳು ದಾಖಲಾಗಿದ್ದು, 5.86 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

1989 ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾರ್ವಜನಿಕರು ವಾನಹಗಳಲ್ಲಿ ಹೆಡ್‌ಲೈಟ್‌ಗಳನ್ನು ಅಳವಡಿಸಬೇಕು. ಎದುರಿನ ವಾಹನಗಳ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ಅಲಂಕಾರಿಕ ಮತ್ತು ಹೆಚ್ಚಿನ-ಫೋಕಸ್ ಲೈಟ್​​​ಗಳನ್ನು ಬಳಸಬಾರದು. ಹೆದ್ದಾರಿಗಳಲ್ಲಿ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬೀದಿ ದೀಪಗಳಿರುವಲ್ಲಿ ಹೈ ಬೀಮ್‌ಗಳನ್ನು ಬಳಸಬಾರದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಒಂದು ಅಥವಾ ಎರಡು ಹೆಡ್‌ಲೈಟ್‌ಗಳನ್ನು ಮಾತ್ರ ಹೊಂದಿರಬೇಕು. ನಾಲ್ಕು ಚಕ್ರ ಮತ್ತು ದೊಡ್ಡ ವಾಹನಗಳು ಎರಡು ಅಥವಾ ನಾಲ್ಕು ಹೆಡ್‌ಲೈಟ್‌ಗಳನ್ನು ಹೊಂದಿರಬಹುದು. ವಾಹನಗಳ ಹೆಡ್​ಲೈಟ್​​​ನಿಂದ ಹೊರಸೂಸುವ ಬೆಳಕನ್ನು ಯಾವಾಗಲೂ ಕೆಳಮುಖವಾಗಿ ಕೇಂದ್ರೀಕರಿಸಬೇಕು ಮತ್ತು ಎಂಟು ಮೀಟರ್ ದೂರದಲ್ಲಿ ವಾಹನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ಕಣ್ಣಿಗೆ ತೊಂದರೆಯಾಗಬಾರದು ಎಂದು ಅವರು ಹೇಳಿದ್ದಾರೆ.

ತೀಕ್ಷ್ಣ ಬೆಳಕಿನ ಎಲ್​ಇಡಿ ಲೈಟ್​ಗಳನ್ನು, ಅದರಲ್ಲಿಯೂ ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿ ಲೈಟ್ ಅಳವಡಿಸುವ ವಾಹನ ಮಾಲೀಕರ ವಿರುದ್ಧ ರಾಜ್ಯ ಸಂಚಾರ ಪೊಲೀಸರು ಈ ತಿಂಗಳ ಆರಂಭದಲ್ಲಿಯೇ ಕಾರ್ಯಾಚರಣೆ ಶುರು ಮಾಡಿದ್ದಾರೆ. ಜೂನ್​ ತಿಂಗಳಲ್ಲಿಯೇ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದರು. ಅದರಂತೆ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಯುತ್ತಿದೆ.

ಸಾಮಾಜಿಕ ಮಾಧ್ಯಮ ಮೂಲಕ ಸೈಬರ್ ವಂಚನೆ ಜಾಗೃತಿ

ನಗರದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಅದರಂತೆ, ಬ್ಯಾಂಕ್ ಕೆವೈಸಿ ಅಪ್​ಡೇಟ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಜಾಗೃತಿ ಸಂದೇಶ ಪ್ರಕಟಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಕ್ಸ್ ಸಂದೇಶ

 

 

ಆರ್​ಬಿಐ ಮಾರ್ಗಸೂಚಿಯ ಪ್ರಕಾರ ಯಾವುದೇ ಬ್ಯಾಂಕುಗಳು ಆನ್​​ಲೈನ್ ಮೂಲಕವೇ ಕೆವೈಸಿ ಅಪ್​ಡೇಟ್ ಮಾಡಲು ಮಾಹಿತಿ ಕೇಳುವಂತಿಲ್ಲ. ಯಾರಾದರೂ ಕರೆ ಮಾಡಿ ಆ ನೆಪದಲ್ಲಿ ವೈಯಕ್ತಿಕ ಮಾಹಿತಿ, ಬ್ಯಾಂಕ್ ದಾಖಲೆಗಳನ್ನು ಕೇಳಿದರೆ ನೀಡಬೇಡಿ. ಒಂದು ವೇಳೆ ಬ್ಯಾಂಕ್ ವಿವರ ನೀಡಿ ಹಣ ಕಳೆದುಕೊಂಡಿದ್ದಲ್ಲಿ ಸೈಬ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡುವಂತೆ ಸಲಹೆ ನೀಡಲಾಗಿದೆ.