ಚಿಕ್ಕಮಗಳೂರು: ಕೆಎಸ್ ಆರ್ ಟಿಸಿ ಚಾಲಕನೊಬ್ಬ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೆಎಸ್ ಆರ್ ಟಿ ಸಿ ಬಸ್ ನ್ನು ನವ ವಧುವಿನಂತೆ ಸಿಂಗಾರಗೊಳಿಸಿ ರಾಜ್ಯದ ಆನೇಕ ಮಹನೀಯರ ಭಾವಚಿತ್ರಗಳನ್ನು ಬಸ್ಸಿಗೆ ಅಂಟಿಸಿ ನಾಡಿನ ಹಿರಿಮೆ, ಗರಿಮೆ ಸಾರುವ ಪ್ರಯತ್ನ ಮಾಡುವ ಮೂಲಕ ಕನ್ನಡದ ಕಂಪನ್ನ ಮೆರೆದಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಡಿಪೋದಲ್ಲಿ ಚಾಲಕ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿರುವ ಅಲ್ತಾಫ್ ತನ್ನ ಬಸ್‌ನ್ನ ಸಂಪೂರ್ಣ ಕನ್ನಡಮಯವಾಗಿಸಿದ್ದಾನೆ. ಕೆಎಸ್‌ಆರ್‌ಟಿಸಿ ಬಸ್‌ಗೆ ಹೂವಿನ ಹಾರ, ಬಾಳೆಕಂದು, ಅಲಂಕಾರಿಕ ಪೇಪರ್‌ನಿಂದ ನವ ವಧುವಿನಂತೆ ಶೃಂಗರಿಸಿ ಬಸ್ಸಿನ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರ ಅಂಟಿಸಿದ್ದಾರೆ.
ಬಸ್ಸಿನ ಎರಡೂ ಬದಿಯಲ್ಲಿ ಸಾಹಿತಿಗಳಾದ ರನ್ನ, ಜನ್ನ, ಕುವೆಂಪು, ಕೃಷ್ಣಶಾಸ್ತ್ರಿ, ಗಿರೀಶ್ ಕಾರ್ನಾಡ್ , ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ, ಸಾಮಾಜಿಕ ಕ್ರಾಂತಿಕಾರಿ ಬಸವಣ್ಣ, ವಚನಕಾರರು, ದಾಸರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್, ಸರ್.ಎಂ.ವಿಶ್ವೇಶ್ವರಯ್ಯ, ಐತಿಹಾಸಿಕ ವೀರಯೋಧರು ಹಾಗೂ ನಟ ಶಂಕರ್‌ನಾಗ್ ಸೇರಿದಂತೆ ಜಿಲ್ಲೆಯ ಪುಣ್ಯ ಕ್ಷೇತ್ರಗಳು, ಪ್ರವಾಸಿ ತಾಣಗಳು, ಜಲಪಾತಗಳು, ದೇವಾಲಯ ಚಿತ್ರಗಳನ್ನು ಬಸ್ಸಿನ ಎರಡೂ ಬದಿಯಲ್ಲಿ ಅಂಟಿಸಿದ್ದಾನೆ. ಈ ಬಸ್‌ನ್ನ ಕಂಡು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪುಲ್ ಖುಷಿ ಪಟ್ರು.