Friday, September 20, 2024
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ರಾಜಸ್ಥಾನದಿಂದ ನಾಯಿ ಮಾಂಸ ತಂದು ಬೆಂಗಳೂರಿನಲ್ಲಿ ಮಾರಾಟ ಆರೋಪ ; ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಹೈಡ್ರಾಮ – ಕಹಳೆ ನ್ಯೂಸ್

ಬೆಂಗಳೂರು: ನಗರದಲ್ಲಿ ನಾಯಿ ಮಾಂಸ (Dog Meat) ದಂಧೆ ಆರೋಪ ಕೇಳಿ ಬಂದಿದೆ. ರಾಜಸ್ಥಾನದಿಂದ (Rajasthan) ಬೆಂಗಳೂರು (Bengaluru) ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಅಂತ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ತಂಡ ಆರೋಪಿಸಿದೆ. ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಸಿ, ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ.

ಇದೇ ವೇಳೆ ಸ್ಥಳಕ್ಕಾಗಮಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಜೊತೆಗೂ ವಾಕ್ಸಮರ ನಡೆಸಿದ್ದಾರೆ. ಆರೋಪ ಅಲ್ಲಗಳೆದಿರುವ ಅಬ್ದುಲ್ ರಜಾಕ್, 2 ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 12 ವರ್ಷದಿಂದ ಈ ವ್ಯವಹಾರ ನಡೀತಿದೆ. ರಾಜಸ್ಥಾನ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ, ಅದನ್ನ ನಾಯಿ ಅಂತಿದ್ದಾರೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡ್ತೇನೆ ಅಂದಿದ್ದಾರೆ. ಅಬ್ದುಲ್ ರಜಾಕ್ ಸಂಬಂಧಿ ಮಾಂಸ ಸಾಗಾಟದ ಲೈಸೆನ್ಸ್ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪುನೀತ್‌ ಕೆರೆಹಳ್ಳಿ, ಜೈಪುರದಿಂದ ಫಿಶ್ ಮಾಂಸ ಅಂತ ಹೇಳಿ ಬೇರೆ ಮಾಂಸ ತಂದಿದ್ದಾರೆ. ಬೇರೆ ಮಾಂಸದ ಜೊತೆ ನಾಯಿ ಮಾಂಸವನ್ನೂ ತಂದಿದ್ದಾರೆ. ಇದು ರಸಲ್ ಮಾರ್ಕೆಟ್‌ಗೆ ಇದು ಹೋಗುತ್ತೆ ಅಂತಾ ಆರೋಪಿಸಿದ್ದಾರೆ.

 

ಮೀನು ಅಂತಾ ಬೋರ್ಡ್ ಹಾಕಿಕೊಂಡು ಮಾಂಸ ಸಾಗಾಟ ಮಾಡ್ತಿದ್ದಾರೆ. ಮೀನು ತಂದಿದ್ದರೇ ಮೀನು ಅಂತಾ ಬೋರ್ಡ್‌ ಇರಬೇಕಿತ್ತು. ಮಾಂಸ ತಂದು ಅದಕ್ಕೆ ಮೀನು ಅಂತಾ ಯಾಕೇ ಬೋರ್ಡ್‌ ಹಾಕಿದ್ದಾರೆ. ನಾಯಿ ಮಾಂಸವೇ ಇರಬೇಕು ಅನ್ನೋ ಅನುಮಾನ, ಬಿಬಿಎಂಪಿ ಅಧಿಕಾರಿಗಳು ಬರಬೇಕು. ಇಲ್ಲೇ ಮಾಂಸ ಸೀಜ್ ಮಾಡಬೇಕು. ಯಾವ ಮಾಂಸ ಅಂತಾ ಗೊತ್ತಾಗಬೇಕು. ಕನಿಷ್ಠ 4 ದಿನದ ಹಿಂದೆ ಕಟ್ ಮಾಡಿರೋ ಮಾಂಸವಿದು. ಇದನ್ನ ಐಸ್ ಬಾಕ್ಸ್‌ನಲ್ಲಿ ತಂದಿರೋದಕ್ಕೆ ಅನುಮತಿ ಇದೆಯಾ? ಇದರ ಬಗ್ಗೆ ಅನುಮಾನ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

 

ಇದು ಕುರಿ ಮಾಂಸ ಅನ್ನೋದರ ಬಗ್ಗೆ ಅನುಮಾನ ಇದೆ, ಮರಿ ಮಾಂಸವನ್ನ 550 ರೂಪಾಯಿಗೆ ಹೇಗೆ ಕೊಡಲು ಸಾಧ್ಯ? ಅಬ್ದುಲ್ ರಜಾಕ್ ಇದು ನಂದು ಅಂತಾ ಬಂದಿದ್ದಾರೆ. ಅದ್ರೇ ಬಿಲ್ ಬಂದಿರೋದು ಬೇರೆಯವರ ಹೆಸರಿನಲ್ಲಿ. ಕೇವಲ 550 ರೂಪಾಯಿಗೆ ಮಾಂಸ ಗ್ರಾಹಕರಿಗೆ ನೀಡ್ತಾರೆ ಅಂದ್ರೆ ಇವರಿಗೆ ಎಷ್ಟಕ್ಕೆ ಸಿಗುತ್ತೆ? ಎಂದೆಲ್ಲಾ ಪುನೀತ್‌ ಕೆರೆಹಳ್ಳಿ ಪ್ರಶ್ನಿಸಿದ್ದಾರೆ.