Saturday, September 21, 2024
ಉತ್ತರ ಪ್ರದೇಶಸುದ್ದಿ

ರಾಮಮಂದಿರಕ್ಕೆ ಬರುವ ಚಿನ್ನ, ಬೆಳ್ಳಿ ಆಭರಣಗಳ ಕಾವಲಿಗೆ ಇಬ್ಬರು ಆರ್​​ಎಸ್​ಎಸ್​​ ಕಾರ್ಯಕರ್ತರ ನೇಮಕ – ಕಹಳೆ ನ್ಯೂಸ್

ತ್ತರಪ್ರದೇಶ: ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾನ (ramlalla) ಪ್ರಾಣಪ್ರತಿಷ್ಠಾಪನೆಯಾದ ಬಳಿಕ ಅಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಹೀಗೆ ಭೇಟಿ ನೀಡುವ ಭಕ್ತರು ಭಾರಿ ಪ್ರಮಾಣದ ಕಾಣಿಕೆ ಅರ್ಪಿಸುತ್ತಿದ್ದಾರೆ.

ಚಿನ್ನ, ಬೆಳ್ಳಿ, ವಜ್ರ, ಮುತ್ತು ಸೇರಿದಂತೆ ಬೆಲೆಬಾಳುವ ಆಭರಣಗಳನ್ನೂ ಸಲ್ಲಿಸುತ್ತಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ಹುಂಡಿಗೆ ಬೀಳುವುದು ಸೇರಿದಂತೆ ಬೆಲೆಬಾಳುವ ಆಭರಣಗಳನ್ನು ಅರ್ಪಿಸುತ್ತಿದ್ದಾರೆ. ಹೀಗಾಗಿ ಇವುಗಳ ನಿರ್ವಹಣೆಗೆಂದು ದೇವಸ್ಥಾನದ ಟ್ರಸ್ಟ್‌ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು (RSS workers) ನೇಮಕ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಈ ಆರೆಸ್ಸೆಸ್ ಕಾರ್ಯಕರ್ತರು ಆಭರಣಗಳನ್ನು ದಾನ ಮಾಡುವ ಪ್ರತಿಯೊಬ್ಬ ಭಕ್ತನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲಿಸಲಾಗುತ್ತಿದೆ. ಮಾಹಿತಿ ದಾಖಲು ಮಾಡಲು ವಿವಿಧ ಪಾಳಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಪ್ರತಿ ದಿನದ ಸಂಜೆ ಕಾಣಿಕೆ ರೂಪದಲ್ಲಿ ಬಂದಿರುವ ಆಭರಣಗಳನ್ನು ದಾಖಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‌ನಲ್ಲಿ ಠೇವಣಿ ಇಡಲಾಗುತ್ತಿದೆ. ಕೆಲವು ಭಕ್ತರು ದೇಣಿಗೆ ಕೌಂಟರ್​ಗೆ ಹೋಗುವ ಬದಲು ಅಲ್ಲಿನ ಸಿಬ್ಬಂದಿ ಮೂಲಕ ಹಣ ನೀಡಲಾಗುತ್ತಿದೆ. ಈ ವಹಿವಾಟುಗಳನ್ನೂ ಎಚ್ಚರಿಕೆಯಿಂದ ದಾಖಲು ಮಾಡಲು ಟ್ರಸ್ಟ್​ ಮುಂದಾಗಿದೆ. ಈ ಎಲ್ಲ ವಹಿವಾಟುಗಳ ಬಗ್ಗೆ ನಿಗಾ ಇಡಲು ಆರ್​ಎಸ್​ಎಸ್​ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

ಬಾಲ ರಾಮನಿಗೆ ಅಲಂಕಾರ ಮಾಡುವ ಆಭರಣಗಳನ್ನು ರಕ್ಷಿಸಲು ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ರಾಮಲಲ್ಲಾನನ್ನು ಅಲಂಕರಿಸುವಾಗ ಮತ್ತು ಅದನ್ನು ತೆಗೆಯುವ ವೇಳೆ ಪುರೋಹಿತರು ನಿವೃತ್ತ ಸೈನಿಕರ ಮೇಲ್ವಿಚಾರಣೆಯಲ್ಲಿ ಲಾಕರ್‌ನಿಂದ ಆಭರಣಗಳನ್ನು ಪಡೆದು ವಾಪಸ್​ ಕೊಡುತ್ತಾರೆ. ಎಲ್ಲ ಆಭರಣವನ್ನು ತೆಗೆಯುವಾಗ ಮತ್ತು ಹಾಕುವಾಗ ಲೆಕ್ಕ ಹಾಕಲಾಗುತ್ತದೆ.

ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ಕೆಲಸ ಮಾಡುವ ಇಬ್ಬರು ಬಂದೂಕು ಹೊಂದಿರುವ ಆರು ಅಂಗರಕ್ಷಕರನ್ನು ಬಾಲರಾಮನ ವಿಗ್ರಹಕ್ಕೆ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಧಾರ್ಮಿಕ ಗುರುಗಳಾಗಿ ಸೇವೆ ಸಲ್ಲಿಸಿದ ಮೂವರು ಸೇರಿದಂತೆ 20 ನಿವೃತ್ತ ಸೇನಾ ಸಿಬ್ಬಂದಿಯನ್ನು ರಾಮ ಮಂದಿರದಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಧಾರ್ಮಿಕ ಗುರುಗಳು ಗರ್ಭಗುಡಿಯ ಹೊರಗೆ ನಿಂತು ಪೂಜೆಗೆ ಸಹಾಯ ಮಾಡುತ್ತಾರೆ. ಉಳಿದ ಸಿಬ್ಬಂದಿ ಭಕ್ತರ ಹರಿವನ್ನು ನಿಯೋಜಿಸುತ್ತಿದ್ದಾರೆ.

ಆರತಿ ಮತ್ತು ಇತರ ಪೂಜೆಗಳ ಸಮಯದಲ್ಲಿ ಗಂಟೆಗಳನ್ನು ಬಾರಿಸಲು ಮತ್ತು ಉಳಿದ ವ್ಯವಸ್ಥೆಗಳನ್ನು ನಿರ್ವಹಿಸಲು ಅವರು ಸಹಾಯ ಮಾಡುತ್ತಾರೆ. 17 ನಿವೃತ್ತ ಸೈನಿಕರು ಸಾಮಾನ್ಯ ಉಡುಪುಗಳನ್ನು ಧರಿಸಿ ದೇಗುಲದ ಆವರಣದ ಮೇಲ್ವಿಚಾರಣೆ ಮಾಡುತ್ತಾರೆ.

ಈ ನಡುವೆ ಶ್ರೀ ರಾಮ ಜನ್ಮಭೂಮಿ ಆವರಣದ ಶೇಷಾವತಾರ ದೇವಾಲಯದ ನಿರ್ಮಾಣ ಪ್ರಾರಂಭವಾಗಿದೆ. ರಾಮಮಂದಿರ ಮತ್ತು ಕುಬೇರ ದಿಬ್ಬದ ನಡುವೆ ಈ ಹೊಸ ದೇವಾಲಯ ನಿರ್ಮಿಸಲಾಗುತ್ತಿದೆ.

ದಕ್ಷಿಣ ಭಾರತದ ಸಂತರ ಸಲಹೆ ಪಡೆದು ಶೇಷಾವತಾರ್ ದೇವಾಲಯದ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ. ಅದರ ಎತ್ತರವು ರಾಮ ಮಂದಿರದಕ್ಕೆ ಸಮಾನವಾಗಿದೆ. ಈ ದೇವಾಲಯವು ಶ್ರೀ ಸೀತಾರಾಮನ ವಿಗ್ರಹ ಹೊಂದಿರುತ್ತದೆ. ಇದನ್ನು ಶೇಷನಾಗ ರಕ್ಷಿಸುತ್ತಾನೆ. ಇನ್ನು ಸಪ್ತ ಮಂಟಪದ ಅಡಿಪಾಯದ ಕೆಲಸವು ಬಹುತೇಕ ಪೂರ್ಣಗೊಂಡಿದೆ. ಅಡಿಪಾಯ ಮತ್ತು ಗೋಡೆಗೆ ಕಲ್ಲುಗಳ ಕಟ್ಟುವ ಕಾರ್ಯ ನಡೆಸಲಾಗುತ್ತಿದೆ.