Friday, September 20, 2024
ಕಾಪುಸುದ್ದಿ

ಸೈಂಟ್ ಜೋನ್ಸ್ ಅಕಾಡಮಿ ಪ್ರೌಢಶಾಲೆ ಮತ್ತು ಉಸಿರಿಗಾಗಿ ಹಸಿರು ಸಂಘಟನೆ ಜಂಟಿಯಾಗಿ ಹಸಿರು ಅಭಿಯಾನ ಕಾರ್ಯಕ್ರಮ -ಕಹಳೆ ನ್ಯೂಸ್

ಸೈಂಟ್ ಜೋನ್ಸ್ ಅಕಾಡಮಿ ಪ್ರೌಢಶಾಲೆ ಮತ್ತು ಉಸಿರಿಗಾಗಿ ಹಸಿರು ಸಂಘಟನೆ ಜಂಟಿಯಾಗಿ ಹಸಿರು ಅಭಿಯಾನ ಕಾರ್ಯಕ್ರಮವನ್ನು ಸಂಘಟನೆ ಮಾಡಿತು. ಸಂಘಟಕರಾದ ಶ್ರೀ ಸಂತೋಷ್ ಎಂ ಶೆಟ್ಟಿಗಾರ್ ರವರು ಪರಿಸರ ಸಂರಕ್ಷಣೆ ಹಾಗೂ ಗಿಡಗಳನ್ನು ನೆಟ್ಟು ಬೆಳೆಸುವ ಮಹತ್ವದ ಬಗ್ಗೆ ತಿಳಿಸಿದರು.

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಯಲ್ಲಮ್ಮ ರವರು ಗಿಡಕ್ಕೆ ಮಣ್ಣು, ಗೊಬ್ಬರ ಮತ್ತು ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ತಮ್ಮ ಮಾತಿನಲ್ಲಿ ಸೋಲಿಗಾಸ್ ಜನರ ಬಗ್ಗೆ ಅವರಿಗೆ ಪರಿಸರದ ಬಗ್ಗೆ ಇರುವ ಕಾಳಜಿ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಣ್ಯ ಇಲಾಖೆ ಅಧಿಕಾರಿ ಶ್ರೀಮತಿ ಅನುಷಾ ಭಟ್ ರವರು ಗಿಡಗಳ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು. ಮಾನ್ಯ ತಹಶೀಲ್ದಾರರಾದ ಡಾ ಪ್ರತಿಭಾ ಆರ್ ರವರು ಗಿಡಗಳನ್ನ ನೆಟ್ಟು ಬೆಳೆಸೋಣ, ತಾವೆಲ್ಲಾ ವಿದ್ಯಾರ್ಥಿಗಳು ಜವಾಬ್ದಾರಿಯುತ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ ಹೆತ್ತವರು ಸಂತಸ ಪಡುವಂತವರಾಗಿ ಎಂದು ಶುಭ ಹಾರೈಸಿ, ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಗಿಡಗಳನ್ನು ವಿತರಿಸಿದರು. ಕಾಪು ಕ್ಷೇತ್ರದ ಮಾನ್ಯ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು . ಗಿಡಗಳನ್ನು ನೆಟ್ಟು ಬೆಳೆಸೋಣ,ಪರಿಸರ ಸಂರಕ್ಷಣೆ ಮಾಡೋಣ ಎಂದು ಹುರಿದುಂಬಿಸಿದರು. ಶಂಕರಪುರ ಸೈಂಟ್ ಜೋನ್ಸ್ ಚರ್ಚ್ ನ ವಂದನೀಯ ಸ್ವಾಮಿ ಅಶ್ವಿನ್ ಅರಾನ್ಹ ರವರು ಗಿಡಗಳ ನನ್ನು ನೆಟ್ಟು ಬೆಳೆಸೋಣ ಆಗಲೇ ನಮಗೆ ಆ ಗಿಡಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಯುವುದು ಅಂತೆಯೇ ಕಾರ್ಯಕ್ರಮಕ್ಕೆ ಆಗಮಿಸಿದ ಹಾಗೂ ಸಂಘಟಿಸಿದ ಸರ್ವರನ್ನು ಅವರು ತುಂಬು ಹೃದಯದಿಂದ ಸ್ಮರಿಸಿದರು.

ಜಾಹೀರಾತು

ವಿದ್ಯಾರ್ಥಿನಿ ರಾಶಿ ಸ್ವಾಗತಿಸಿದರು. ವಿದ್ಯಾರ್ಥಿ ಕವನ್ ವಂದಿಸಿದರು. ವಿದ್ಯಾರ್ಥಿನಿ ರೇಶನ್ ಪಿಂಟೊ ನಿರೂಪಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ವ್ರಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.