Sunday, January 19, 2025
ಉಡುಪಿಯಕ್ಷಗಾನ / ಕಲೆಸುದ್ದಿ

ಉಡುಪಿಯ ವಿದುಷಿ ಶ್ರಾವ್ಯ ಹಿರಿಯಡ್ಕ ಭರತನಾಟ್ಯದಲ್ಲಿ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ – ಕಹಳೆ ನ್ಯೂಸ್

ಉಡುಪಿ : ಹಿರಿಯಡ್ಕದ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ವಿದುಷಿ ಶ್ರಾವ್ಯ ಹಿರಿಯಡ್ಕ ಇವರು ಬೆಂಗಳೂರು ದೂರದರ್ಶನ ಕೇಂದ್ರದ ಆಯ್ಕೆ ಪ್ರಕ್ರಿಯೆಯಲ್ಲಿ ಭರತನಾಟ್ಯ ಕ್ಷೇತ್ರದಲ್ಲಿ “ಬಿ” ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿತ್ತಾರೆ.


ಶ್ರಾವ್ಯ ಅವರು ಉಡುಪಿಯ ಪ್ರತಿಷ್ಠಿತ ಹೆಜ್ಜೆ-ಗೆಜ್ಜೆ(ರಿ.) ನೃತ್ಯ ಸಂಸ್ಥೆಯ ನಿರ್ದೇಶಕಿ ನೃತ್ಯ ಸಿಂಧು ವಿದುಷಿ ಯಶಾ ರಾಮಕೃಷ್ಣ ಇವರ ಶಿಷ್ಯೆಯಾಗಿದ್ದು, ಹಿರಿಯಡ್ಕದ ಬಬಿತಾ ಮತ್ತು ಯಾದವ ದಂಪತಿಗಳ ಪುತ್ರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಸಾಫ್ಟ್ವೇರ್ ಉದ್ಯೋಗಿಯಾಗಿರುವ ಇವರು ಹಿರಿಯಡ್ಕದಲ್ಲಿ ತಮ್ಮ ಭರತನಾಟ್ಯ ಸಂಸ್ಥೆಯ ಮೂಲಕ ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಾ ತಮ್ಮ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು