Tuesday, January 21, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ನಿಯಮ 377ರ ಅಡಿಯಲ್ಲಿ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಚಟುವಟಿಕೆಗಳ ಕುರಿತು ಲೋಕಸಭೆಯ ಗಮನಸೆಳೆದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ -ಕಹಳೆ ನ್ಯೂಸ್

ನಿಯಮ 377ರ ಪ್ರಕಾರ ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಸಂಸದರಿಗೆ ತಮ್ಮ ವಿಷಯಗಳನ್ನು ಸದನದ ಮುಂದಿಡುವ ಅವಕಾಶವಿದ್ದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರೆ ಮೀರಿರುವ ಮಾದಕದ್ರವ್ಯ ವ್ಯಸನೆ ಮತ್ತು ಮಾರಾಟದ ಚಟುವಟಿಗೆಗಳ’ ಕುರಿತು ಸದನದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

“ಪ್ರತಿ ತಿಂಗಳ ಮಾಧ್ಯಮಗಳ ಹೆಡ್‌ಲೈನ್‌ಗಳನ್ನು ಗಮನಸಿದರೆ ನಗರದಲ್ಲಿ ಡ್ರಗ್ಸ್‌ನ ಅತಿರೇಕದ ಚಟುವಟಿಕೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು. ಮಂಗಳೂರು ನಗರವು ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ದೇಶದಾದ್ಯಂತದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಾದಕದ್ರವ್ಯಗಳ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳು ಇದೆ ಎಂಬುವುದು ಅಲ್ಲಗಳೆಯಲಾಗದ ವಿಷಯ” ಎಂದು ಸಂಸದರು ಉಲ್ಲೇಖಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಕಳೆದ ವರ್ಷ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೂಡ ಸಾಬೀತಾಗಿತ್ತು. ಪೊಲೀಸರಿಂದ ನಿರಂತರ ಕಾರ್ಯಾಚರಣೆ ನಡೆದರೂ ಮಾದಕದ್ರವ್ಯ ಮಾರಟ ಮತ್ತು ವ್ಯಸನೆಯಲ್ಲಿ ಇಳಿಕೆ ಕಂಡಿಲ್ಲ ಹೊರತು ಇದರ ಮುಂದುವರಿದ ಭಾಗವಾಗಿ ಶಾಲಾ ಮಕ್ಕಳು ಕೂಡ ಇದರ ವ್ಯಸನಕ್ಕೆ ಒಳಗಾಗುತ್ತಿರುವುದು ಭಯಾನಕ” ಎಂದು ಸಂಸದರು ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಉತ್ತಮ ಆದಾಯವನ್ನು ಹೊಂದಿರುವ ಮನೆತನದಿಂದ ಬಂದಂತಹ ಯುವಕರು ಡ್ರಗ್ ಪೆಡ್ಲರ್‌ಗಳ ಮುಖ್ಯ ಟಾರ್ಗೆಟ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡದಲ್ಲಿ ವಿದ್ಯಾರ್ಥಿನಿಯರನ್ನು ಕೂಡ ಪೆಡ್ಲರ್‌ಗಳಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ವರದಿಗಳು ಇದೆ. ಮಂಗಳೂರು ನಗರದಲ್ಲಿರುವ ಮಾದಕ ವ್ಯಸನ ನಿರ್ಮೂಲನಾ ಕೇಂದ್ರಗಳಿಗೆ ತಿಂಗಳಿಗೆ ಸರಾಸರಿ 60 ಮಂದಿ ಭೇಟಿ ನೀಡುತ್ತಿರುವುದು ಭಯಾನಕ ವಿಷಯ’ ಎಂದು ಸಂಸದರು ಉಲ್ಲೇಖಿಸಿದ್ದಾರೆ.

“ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮಾದಕದ್ರವ್ಯ ಚಟುವಟಿಗಳನ್ನು ಮಟ್ಟ ಹಾಕಬೇಕಾಗಿದೆ ಯಾಕೆಂದರೆ ಇದರಿಂದ ಬರುವಂತಹ ಆದಾಯವು ನೇರವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ” ಆದ್ದರಿಂದ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾದಕದ್ರವ್ಯದ ಜಾಲವನ್ನು ಬುಡ ಸಮೇತ ಕಿತ್ತು‌ಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಸಲ್ಲಿಸಿದ ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.