Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ.ಕ.ಜಿಲ್ಲೆಗೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಹೆಚ್ ಸೆಲ್ವಕುಮಾರ್ : ಮಳೆಯಿಂದ ಹಾನಿಯಾದ ಸ್ಥಳಗಳಿಗೆ ಭೇಟಿ -ಕಹಳೆ ನ್ಯೂಸ್

ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಹೆಚ್ ಸೆಲ್ವಕುಮಾರ್ ಅವರು ದ.ಕ.ಜಿಲ್ಲೆಗೆ ಆಗಮಿಸಿ ಮಳೆಯಿಂದ ಹಾನಿಯಾದ ಸ್ಥಳಗಳಿಗೆ ನೀಡಿದರು ,ಹಾಗೂ ಪಿ.ಡಬ್ಲ್ಯೂ ಡಿಗೆ ಸಂಬಂಧ ಪಟ್ಟ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು, ಮಂಗಳೂರು ತಾಲೂಕಿನ ಕೆತ್ತಿ ಕಲ್ಲು ಗುಡ್ಡ, ಬಂಟ್ವಾಳ ತಾಲೂಕು ಕಲ್ಲಡ್ಕ ಮಾಣಿ, ಉಪ್ಪಿನಂಗಡಿ, ಮೂಲಕ ಗುಂಡ್ಯ, ಶಿರಡಿ ಮತ್ತು ಸಕಲೇಶಪುರ ತಾಲೂಕಿನ ರಾಷ್ಟೀಯ ಹೆದ್ದಾರಿಯಲ್ಲಿ ಹಾನಿಯಾದ ಸ್ಥಳ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪುತ್ತೂರು ಸಹಾಯಕ ಜುಬಿನ್ ಮೋಹಪಾತ್ರ, ಪಿಡಬ್ಲೂಡಿ ಚೀಫ್ ಎಂಜಿನಿಯರ್, ಎನ್‌‌.ಎಚ್.ಚೀಫ್ ಎಂಜಿನಿಯರ್, ಎನ್.ಎಚ್ ನ‌ಪಿ.ಡಿ.ಪುತ್ತೂರು ಡಿ.ವೈ.ಎಸ್.ಪಿ.ತಹಶೀಲ್ದಾರ್ ಗಳು, PDO, RI , PWD AEE, ರವರು ಗಳು ಹಾಜರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು