ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ : ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನೇತ್ರಾವತಿ-ಕಹಳೆ ನ್ಯೂಸ್
ಕಳೆದ ರಾತ್ರಿಯಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಮಲೆನಾಡು ಪ್ರದೇಶದಲ್ಲಿಯೂ ವ್ಯಾಪಕ ಮಳೆಯ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಬಂಟ್ವಾಳದಲ್ಲಿ ಬೆಳಗ್ಗೆ ನೀರಿನ ಮಟ್ಟ 7.9ಮೀ ಗೆ ತಲುಪಿದೆ.
ಈಗಾಗಲೇ ಕೆಲವೊಂದು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಪ್ರವಾಹದ ಅಪಾಯದ ಸಾಧ್ಯತೆ ಹೆಚ್ಚಿದೆ. ತಹಶಿಲ್ದಾರ್ ಅರ್ಚನಾ ಭಟ್ ಏನು ಹೇಳಿದ್ದಾರೆ.
ಬಂಟ್ವಾಳ ಟೌನ್ ಲಿಮಿಟ್ಸ್ ಅಲ್ಲಿ ನದಿ ನೀರು ಏರಿಕೆಯಾಗಿದ್ದು, ರಸ್ತೆಗೆ ನದಿ ನೀರು ಬಂದಿರುತ್ತದೆ ಆದರೆ ಪೇಟೆ ಮಕ್ಕಳು ಹೆಚ್ಚಾಗಿ ಆಟೋ ಮತ್ತು ವ್ಯಾನ್ ಗಳಲ್ಲಿ ಶಾಲೆಗೆ ತೆರಳುತ್ತಾರೆ.
ನದಿಯ ತಡಗಳಲ್ಲಿರುವ ಗ್ರಾಮಾಂತರ ಪ್ರದೇಶದ ಶಾಲೆಗಳಾದ ಬಾಳ್ತಿಲ್ಲ ಪೆರ್ನೇ ಕಡೆಶಾಲಿಯ ಮತ್ತು ಇನ್ನೂ ನೀರಿನ ಅಪಾಯಕಾರಿ ಮಟ್ಟದಿಂದ ಅಪಾಯವುಳ್ಳ ಶಾಲೆಗಳ ಸಿ.ಆರ್.ಪಿ. ಗಳಿಗೆ ಮತ್ತು ಎಸ್.ಡಿ.ಎಂ.ಸಿ. ಸಮಿತಿಗಳಿಗೆ ತಮ್ಮ ಹಂತದಲ್ಲೇ ರಜೆ ನೀಡುವಂತೆ ಸೂಚನೆ ನೀಡಲಾಗಿರುತ್ತದೆ.