Wednesday, November 27, 2024
ದಕ್ಷಿಣ ಕನ್ನಡಮಂಗಳೂರು

ಮಂಗಳೂರು :ಶ್ರೀ ಭುವನೇಂದ್ರ ಹಾಲ್‌ನಲ್ಲಿ ಕೆನರಾ ನಂದಗೋಕುಲ್ ಹುಲಿಯ ದಿನಾಚರಣೆ : ಹುಲಿವೇಷ ಧರಿಸಿ ಗಮನ ಸೆಳೆದ ಮಕ್ಕಳು -ಕಹಳೆ ನ್ಯೂಸ್

ಮಂಗಳೂರು : ಕೆನರಾ ನಂದಗೋಕುಲ್ ತಂಡವು ಶ್ರೀ ಭುವನೇಂದ್ರ ಸಭಾಭವನದಲ್ಲಿ ಹುಲಿಯ ದಿನವನ್ನು ವಿಜೃಂಭಣೆಯಿಂದ ಆಚರಿಸಿತು. ಮಕ್ಕಳು ಹುಲಿವೇಷ ಧರಿಸಿ ಎಲ್ಲರ ಗಮನ ಸೆಳೆದರು. ಕೆಲವು ಮಕ್ಕಳು ಹುಲಿಗಳ ಬಗ್ಗೆ ಭಾವನಾತ್ಮಕ ಭಾಷಣಗಳನ್ನು ನೀಡಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ “ಹುಲಿಗಳನ್ನು ರಕ್ಷಿಸಿ, ಪ್ರಕೃತಿಯನ್ನು ಉಳಿಸಿ” ಎಂಬ ಘೋಷಣೆ ಕೇಳಿಬಂತು. ಪುಣ್ಯಕೋಟಿ ಎಂಬ ಪ್ರಸಿದ್ಧ ನಾಟಕವನ್ನು ಮಕ್ಕಳು ಅಭಿನಯ ಮಾಡಿ, ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ನೈತಿಕ ಪಾಠವನ್ನೂ ನೀಡಿದ್ದಾರೆ. ಹೆಮ್ಮೆಯ ಹುಲಿ ನೃತ್ಯ ಪ್ರದರ್ಶನವು ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆ ಆಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್‌ನ್ಯಾಷನಲ್ ಶಾಲೆಯ ನಿರ್ದೇಶಕಿ ಶ್ರೀಮತಿ ಅಂಜನಾ ಕಾಮತ್, ಸಂಯೋಜಕಿ ಶ್ರೀಮತಿ ವಂದನಾ, ಮತ್ತು ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.