Sunday, January 19, 2025
ಕ್ರೈಮ್ರಾಜ್ಯಸುದ್ದಿ

4 ಮಕ್ಕಳ ತಾಯಿಯನ್ನ ಮದ್ವೆಯಾಗಿ ಇಸ್ಲಾಂಗೆ ಮತಾಂತರವಾಗುವಂತೆ ಚಿತ್ರಹಿಂಸೆ ; ಜಿಹಾದಿ ಮುಜಾಹಿದ್‌ ಖಾನ್‌ ಅರೆಸ್ಟ್‌ – ಕಹಳೆ ನ್ಯೂಸ್

ಹುಬ್ಬಳ್ಳಿ: ನಾಲ್ಕು ಮಕ್ಕಳ ತಾಯಿಯನ್ನೇ ಮದ್ವೆಯಾಗಿದ್ದ ಭೂಪನೊಬ್ಬ, ಮದುವೆ ಬಳಿಕ ಇಸ್ಲಾಂಗೆ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಪತಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಬೆಂಗಳೂರುಮೂಲದ ಮುಜಾಹಿದ್‌ ಖಾನ್‌ ಬಂಧಿತ ಆರೋಪಿ. ಆರೋಪಿ ಮುಜಾಹಿದ್‌ ನಾಲ್ಕು ಮಕ್ಕಳ ತಾಯಿಯಾಗಿದ್ದ ಅಶ್ವಿನಿ ಎಂಬಾಕೆಯನ್ನು 2017ರಲ್ಲಿ 2ನೇ ಮದುವೆಯಾಗಿದ್ದ. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಸ್ವಲ್ಪ ದಿನ ಕಳೆದಂತೆ ಮುಜಾಹಿದ್‌, ಪತ್ನಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಜೊತೆಗೆ ಜೀವ ಬೆದರಿಕೆ ಒಡ್ಡುತ್ತಿದ್ದ. ಈ ಬಗ್ಗೆ ಕಳೆದ ಶುಕ್ರವಾರ ಅಶ್ವಿನಿ‌, ತನ್ನ ಪತಿ ವಿರುದ್ಧ ಕಲಘಟಗಿ ಪೊಲೀಸರಿಗೆ ದೂರು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಶ್ವಿನಿಗೆ ಶ್ರೀರಾಮಸೇನೆ ಬೆಂಬಲ ಸಹ ವ್ಯಕ್ತವಾಗಿತ್ತು. ದೂರು ಆಧರಿಸಿ ಬೆಂಗಳೂರಿನಲ್ಲಿ ಮುಜಾಹೀದ್ ಖಾನ್ ಬಂಧಿಸಿ ಕಲಘಟಗಿ ಠಾಣೆಗೆ ಕರೆತರಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು